ಬೆಂಗಳೂರು: ರೈಲು ಹಳಿಯಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರದ ಜತೆಗೆ 30 ಲಕ್ಷ ಅಮೆರಿಕ ಡಾಲರ್ ಮೌಲ್ಯದ ಕರೆನ್ಸಿಯ ಕಟ್ಟು ಇದ್ದ ಪ್ಲಾಸ್ಟಿಕ್ ಚೀಲವೊಂದು ಸಿಕ್ಕಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಡಾಲರ್ ಕರೆನ್ಸಿಯ ಸತ್ಯಾಸತ್ಯತೆ ಇನ್ನೂ ದೃಢವಾಗಿಲ್ಲ.
ಡಾಲರ್ ಕಟ್ಟುಗಳು ನಕಲಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಅವುಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಕಳುಹಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.


