ತುರುವೇಕೆರೆ ಪಟ್ಟಣದಲ್ಲಿರುವ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಮಿತಿಯ ಕಚೇರಿಯಲ್ಲಿ ವೀರ ವನಿತೆ ಓಬವ್ವಳ ಜಯಂತಿಯನ್ನು ಆಚರಿಸಲಾಯಿತು. ಕಚೇರಿಯಲ್ಲಿ ಓಬವ್ವಳ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ದಬ್ಬೇಘಟ್ಟ ಗ್ರಾಮದ ತಮಟೆ ಕಲಾವಿದೆ ಭಾಗ್ಯಮ್ಮ ರವರನ್ನು ಆದಿಜಾಂಭವ ಕ್ಷೇಮಾಭಿವೃದ್ಧಿ ಸಮಿತಿಯ ಸಂಸ್ಥಾಪಕರಾದ ಸಿ ಎಸ್ ಮೂರ್ತಿ ಹಾಗೂ ಗಣ್ಯರು ನೀಲಿಯ ಪೇಟವನ್ನು ತೊಡಿಸಿ ಶಾಲು ಹಾರ ಹಾಕಿ ಸನ್ಮಾನಿಸಿದರು.
ಡಿಎಸ್ಎಸ್ ತಾಲೂಕು ಸಂಚಾಲಕರಾದ ಕುಣಿಕೆನಹಳ್ಳಿ ಜಗದೀಶ್ ರವರು ಒನಕೆ ಓಬವ್ವ ರವರ ಕಿರುಪರಿಚಯನ್ನು ಮಾಡಿಕೊಟ್ಟರು ಮತ್ತು ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ , ಡೊಂಕಿಹಳ್ಳಿ ರಾಮಯ್ಯನವರು ಓಬವ್ವಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ, ಪ್ರಗತಿ ಪರ ಹೋರಾಟಗಾರ ತುರುವೇಕೆರೆ ಸತೀಶ್ ,ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ,ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಚನ್ನಕೇಶವ, ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಮಿತಿಯ ಕಚೇರಿಯ ಸಹಾಯಕರಾದ ಕುಮಾರಿ ಅಮೃತ ,ಪುರ ರಾಮಚಂದ್ರು ಸೇರಿದಂತೆ ಮಾದಿಗ ಮತ್ತು ಛಲವಾದಿ ಜನಾಂಗದ ಮುಖಂಡರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


