ಬೆಂಗಳೂರು: ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದ ಬಳಿ ವೇಗವಾಗಿ ಬಂದ ಎಸ್ ಯುವಿ ಬೈಕ್‌ನಲ್ಲಿದ್ದ ಇಬ್ಬರು ಸವಾರರ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಾಯಗಳಾಗಿರುವ ಘಟನೆ ಸೋಮವಾರ ನಡೆದಿದೆ. ಗಾಯಾಳುಗಳನ್ನು ಕಿರಣ್, ಜಸ್ಮಿತಾ ಮತ್ತು ಬಸಂತ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅಪಘಾತದ ನಂತರ ಬೈಕ್‌ನಲ್ಲಿದ್ದ ಕಿರಣ್ ಜಿಗಿದು ಕೆಳಗೆ ಬಿದ್ದಿದ್ದಾರೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಇನ್ನೊಂದು ಬೈಕ್ ನಲ್ಲಿದ್ದ ಜಸ್ಮಿತಾ ಮತ್ತು ಬಸಂತ್ ಕುಮಾರ್ ಗೂ ಗಾಯಗಳಾಗಿವೆ.”
ಕಾರು ಚಾಲಕನ ವಿರುದ್ಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.


