ಪಾವಗಡ: ಪಾವಗಡ ರೊಪ್ಪ ಗ್ರಾಮ ಪಂಚಾಯಿತಿ ಹಾಗೂ ಪಾವಗಡ ಪುರಸಭೆ ವ್ಯಾಪ್ತಿಯ ಮಧ್ಯ ಭಾಗದಲ್ಲಿ ಇರುವಂತ ಸುಪ್ರಸಿದ್ದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಹುಲಿಬೆಟ್ಟ ತಾಂಡಾಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಈ ರಸ್ತೆ ದುರಸ್ತಿ ಮಾಡುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಒತ್ತಾಯಿಸಿದ್ದಾರೆ.
ರಸ್ತೆಯ ಎರಡು ಎಕ್ಕಲಗಳಲ್ಲಿ ಸೀಮೆ ಜಾಲಿ ಗಿಡ ಬೆಳೆದು ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ತೆರಳಲು ತೀವ್ರ ಸಂಕಷ್ಟ ಉಂಟಾಗಿದೆ. ರಸ್ತೆಯ ನಡುವೆ ಗುಂಡಿಗಳು ಏರ್ಪಟ್ಟು ಮಳೆಯ ನೀರು ನಿಂತು ಅವ್ಯವಸ್ಥೆಯ ಆಗರದಂತೆ ಕಂಡು ಬಂದಿದೆ.
ಈ ರಸ್ತೆಯಲ್ಲಿರುವ ಗುಂಡಿಗಳಿಂದ ವಾಹನ ಸವಾರರು ಸಂಕಷ್ಟಕ್ಕೀಡಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು. ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿರುವಂತಹ ಘಟನೆಗಳು ಕೂಡ ನಡೆದಿವೆ. ಹೀಗಾಗಿ ದೊಡ್ಡ ಅನಾಹುತಗಳು ನಡೆಯುವ ಮುನ್ನವೇ ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು ರಸ್ತೆಯನ್ನು ಸರಿಪಡಿಸಿ ಹಾಗೂ ರಸ್ತೆಯ ಎರಡು ಭಾಗದಲ್ಲಿ ಇರುವಂತಹ ಸೀಮೆ ಜಾಲಿ ಗಿಡಗಳನ್ನು ತೆರವು ಗೊಳಿಸುವಂತೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಒತ್ತಾಯಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700