ತಿಪಟೂರಿನಲ್ಲಿ 33ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕ ಬಾಲಕಿಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್ ಶಿಪ್ ಡಿಸೆಂಬರ್ 13 ರಿಂದ 17ರವರೆಗೆ ಆಯೋಜಿಸಲಾಗಿದೆ.
ಈಗಾಗಲೇ ಹಲವು ಬಾರಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕೋ ಕೋ ಪಂದ್ಯಾವಳಿಗಳನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ವರ್ ಅನುಭವ ಅವರಿಗಿದ್ದು, ಈಗ ಅವರು ರಾಷ್ಟ್ರೀಯ ಕೋಕೋ ಫೆಡರೇಶನ್ ಉಪಾಧ್ಯಕ್ಷ ಸ್ಥಾನದ ಜೊತೆಗೆ ಕರ್ನಾಟಕ ಖೋ ಖೋ ಸಂಸ್ಥೆಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು ಈ ಪಂದ್ಯಾವಳಿ ಮಹತ್ವ ಪಡೆದುಕೊಂಡಿದೆ ಡಿಸೆಂಬರ್ 13ರಂದು ಗೃಹ ಸಚಿವ ಪರಮೇಶ್ವರ್ ಕ್ರೀಡಾ ಸಚಿವ ಬಿ ನಾಗೇಂದ್ರ ಅವರು ರಾಷ್ಟ್ರೀಯ ಕೋ ಕೋ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಬಹುಮಾನ ವಿತರಣೆಯನ್ನು ಸಹಕಾರ ಸಚಿವ ಕೆ. ಎನ್. ರಾಜಣ್ಣ ಸಂಸದ ಡಿ ಎಸ್ ಬಸವರಾಜ್ ತಿಪಟೂರು ಶಾಸಕ ಕೆ ಷಡಕ್ಷರಿ ಅವರು ಆಗಮಿಸಲಿದ್ದಾರೆ.
ಪಂದ್ಯಾವಳಿಗಾಗಿ ಎರಡು ಸಂಪೂರ್ಣ ಸಿಂಥಟಿಕ್ ಕೋಟ್ ಸೇರಿ ಐದು ವಿಶೇಷ ಕೋರ್ಟ್ ಗಳನ್ನು ನಿರ್ಮಿಸಲಾಗಿದ್ದು, ಈ ಪಂದ್ಯಾವಳಿ ಯಶಸ್ವಿಗೆ ಹಲವು ಕ್ರೀಡಾ ಸಂಘ ರೋಟರಿ ಸಂಸ್ಥೆ ಸ್ವಯಂಸೇವಕರು ಯಶಸ್ವಿಗೆ ಶ್ರಮಿಸಲಿದ್ದಾರೆಈ ಸುದ್ದಿಗೋಷ್ಠಿಯಲ್ಲಿ ಎಸ್ ವಿ ಪಿ ವಿದ್ಯಾ ಸಂಸ್ಥೆಯ ರಾಜಶೇಖರ್ ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್ ಹಲವಾರು ಮುಖಂಡರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು


