ತುಮಕೂರು: ಕೈಸೆಟ್ಸ್ ಅಟ್ ಬೀಬಲ್ ಡಾಟ್ ಕಾಮ್ ಎಂಬ ಮೇಲ್ ಐಡಿ ಇಂದ ಬೆಂಗಳೂರಿನ 15 ಶಾಲೆಗಳಲ್ಲಿ ಬಾಂಬನ್ನು ಇಡಲಾಗಿದೆ ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಕೊಂದು ಹಾಕುತ್ತೇವೆ ಎಂದು ಬಂದಿ̧ದೆ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಕೊರಟಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇ-ಮೇಲ್ ಬಂದಿರುವ ಮೂಲವನ್ನು ಪತ್ತೆಹಚ್ಚಲು ಈಗಾಗಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಸಕ್ರಿಯರಾಗಿದ್ದಾರೆ. ಅಲ್ಲದೆ 15 ಶಾಲೆಗಳಿಗೆ ತೆರಳಿ ಸ್ಪೋಟಕಗಳು ಇರುವ ಕುರಿತಂತೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಶಾಲೆಗಳಲ್ಲಿ ಬಾಂಬು ಇಲ್ಲದಿರುವ ಬಗ್ಗೆ ನಾನು ಕೂಡ ಬಯಸುತ್ತೇನೆ. ಆಕಸ್ಮಾತ್ ಇದ್ದರೆ ಅದನ್ನು ಯಾವ ರೀತಿ ನಿಷ್ಕ್ರಿಯಗೊಳಿಸಬೇಕು ಎಂಬ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅವರು ಕೂಡ ಸಕ್ರಿಯರಾಗಿದ್ದಾರೆ. ಅಕಸ್ಮಾತ್ ರಾಜ್ಯದಲ್ಲಿ ಉಗ್ರ ಸಂಘಟನೆಗಳು ಚಟುವಟಿಕೆ ನಡೆಸುತ್ತಿವೆ ಎಂಬ ಬಗ್ಗೆ ಮಾಹಿತಿ ಇದ್ದರೆ ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿದೆ ಎಂದು ಹೇಳಿದರು.
ಸ್ಪಷ್ಟವಾಗಿ ಯಾವ ಉಗ್ರ ಸಂಘಟನೆ ಇದರಲ್ಲಿ ತೊಡಗಿದೆ ಎಂಬುದು ಹೇಳಲು ಸಾಧ್ಯವಿಲ್ಲ ಆದರೆ ಶಾಲೆಗಳಿಗೆ ಬಂದಿರುವ ಇಮೇಲ್ ನಲ್ಲಿ ಮತಾಂತರವಾಗಬೇಕು ಇಲ್ಲದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಕಳೆದ ವರ್ಷ ಸಹ ಅನೇಕ ಶಾಲೆಗಳಿಗೆ ಈ ರೀತಿಯ ಬೆದರಿಕೆ ಮೇಲ್ ಗಳು ಬಂದಿದ್ದವು. ಆದರೆ ಅದೆಲ್ಲವೂ ಇರಬಹುದು ಎಂಬ ಊಹೆಯಲ್ಲಿ ಮುಂದುವರೆಯಲಾಗಿತ್ತು ಆದರೆ ನಾವು ಈಗ ಆ ರೀತಿಯ ಊಹೆಯಲ್ಲಿ ಇರುವುದಿಲ್ಲ ಬದಲಾಗಿ ಶೇಕಡ ಒಂದು ರಷ್ಟು ಶಂಕೆ ಇದ್ದರೂ ಕೂಡ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು.
ಶಾಲೆಯ ಆವರಣವನ್ನು ಸಂಪೂರ್ಣ ಪರಿಶೀಲಿಸಿದ ನಂತರವೇ ಶಾಲೆ ಆರಂಭಿಸಲು ಸೂಚನೆ ನೀಡಲಾಗಿದೆ ಅಲ್ಲದೆ ಈಗಾಗಲೇ ಶಾಲೆಗಳಿಗೆ ರಜೆ ಸಹ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 15 ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳಲ್ಲಿಯೂ ಕೂಡ ಗಮನಹರಿಸುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದರು.