ಐಪಿಎಲ್ ನನ್ನ ಇಡೀ ವೃತ್ತಿ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ ಟೂರ್ನಿ ಎಂದು ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ.
ಐಪಿಎಲ್ ನಿಂದಾಗಿ ನಾನು ಅನೇಕ ಶ್ರೇಷ್ಠ ಆಟಗಾರರು ಮತ್ತು ತರಬೇತುದಾರರೊಂದಿಗೆ ಆಡಲು ಸಾಧ್ಯವಾಯಿತು. ನಾನು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿತು.
ಆಸ್ಟ್ರೇಲಿಯಾದ ಹೆಚ್ಚು ಆಟಗಾರರು ಐಪಿಎಲ್ ನಲ್ಲಿ ಭಾಗವಾಗಬೇಕೆಂದು ಬಯಸುತ್ತಾರೆ. ಏಕೆಂದರೆ ಅವರು ಸಾಕಷ್ಟು ಅನುಭವವನ್ನು ಪಡೆಯುತ್ತಾರೆ ಎಂದು ಮ್ಯಾಕ್ಸಿ ಹೇಳಿದ್ದಾರೆ.
ನಾನು ಕೊನೆಯವರೆಗೂ ಆಡಲು ಬಯಸುವ ಏಕೈಕ ಪಂದ್ಯಾವಳಿ ಐಪಿಎಲ್ ಎಂದು ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ.
ಯಾವಾಗ ನನಗೆ ನಡೆಯಲು ಆಗುವುದಿಲ್ಲ ಅನಿಸುತ್ತದೆಯೊ ಅಲ್ಲಿಯವರೆಗೆ ನಾನು ಐಪಿಎಲ್ ಆಡುತ್ತಲೇ ಇರುತ್ತೇನೆ. ಐಪಿಎಲ್ ನನ್ನ ಇಡೀ ವೃತ್ತಿ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ ಟೂರ್ನಿಯಾಗಿದೆ.


