ಉತ್ತರಪ್ರದೇಶ: ಯುವಕನೊಬ್ಬ ರಾಮಮಂದಿರದ ಪ್ರತಿಕೃತಿಯನ್ನು ಪಾರ್ಲೆ ಜಿ ಬಿಸ್ಕಿಟ್ ಗಳನ್ನು ಬಳಸಿ ನಿರ್ಮಿಸುವ ಮೂಲಕ ತನ್ನ ವಿಶಿಷ್ಟ ಪ್ರತಿಭೆ ಪ್ರದರ್ಶಿಸಿದ್ದಾನೆ. ಯುವಕನನ್ನು ದುರ್ಗಾಪುರ ಮೂಲದ ಛೋತನ್ ಘೋಷ್ ಎಂದು ಗುರುತಿಸಲಾಗಿದೆ.
4*4 ಅಡಿ ಆಯತದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಕೃತಿಗೆ 20 ಕೆಜಿ ಬಿಸ್ಕೆಟ್ ಬಳಸಲಾಗಿದೆ. ತನ್ನ ಸ್ನೇಹಿತರ ಸಹಾಯದಿಂದ ಛೋತನ್ ಘೋಷ್ ಐದು ದಿನದಲ್ಲಿ ನಿರ್ಮಿಸಿದ್ದಾರೆ.
ಛೋತನ್ ಘೋಷ್ ನ ಕಲೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


