ರಾಮ, ಸೀತೆ, ಲಕ್ಷ್ಮಣ, ಹನುಮ ಇರುವ ಬ್ರಿಟಿಷ್ ಈಸ್ಟ್ ಇಂಡಿಯಾ ಕಾಲದ ನಾಣ್ಯವೊಂದು ಪತ್ತೆಯಾಗಿದೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸುನೀಲ್ ಎಂಬುವರ ಮನೆಯಲ್ಲಿ ಈ ನಾಣ್ಯ ಸಿಕ್ಕಿದೆ.
ಇಂದಿಗೂ ನಾಣ್ಯಕ್ಕೆ ಪೂಜೆ ನಡೆಯುತ್ತಿದೆ. 1818ನೇ ಇಸವಿಯ ನಾಣ್ಯ ಇದಾಗಿದ್ದು, ನಾಣ್ಯದ ಒಂದು ಭಾಗದಲ್ಲಿ ರಾಮಸೀತೆಯ ಭಾವಚಿತ್ರವಿದ್ದು, ಮತ್ತೊಂದು ಭಾಗದಲ್ಲಿ ಯಕೆ ಆಫ್ ಅಣ್ಣ ಎಂದು ನಮೂದಿಸಲಾಗಿದೆ. 206 ವರ್ಷವಾದರೂ, 50 ಗ್ರಾಂ ತೂಕವಿರುವ ಈ ನಾಣ್ಯ ಇಂದಿಗೂ ತನ್ನ ಹೊಳಪನ್ನ ಕಳೆದುಕೊಂಡಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ.


