ಲಕ್ನೋ: 5 ವರ್ಷದ ಮಗು ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ನಡೆದಿದೆ.
ಬಾಲಕ ತನ್ನ ಅಮ್ಮನ ಜೊತೆದಯ ಮಲಗಿಕೊಂಡು ಮೊಬೈಲ್ ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿತ್ತು.ಇದೇ ವೇಳೆ ಮಗುವಿನ ಕೈಯಿಂದ ಫೋನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದು ಆ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾದರೂ. ಅದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
“ಮಗು ಹೃದಯಾಘಾತದಿಂದ ಸಾವನ್ನಪ್ಪಿದೆಯೇ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ತನಿಖೆಯ ವಿಷಯವಾಗಿದೆ” ಎಂದು ಅಮ್ರೋಹಾ ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.


