ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಟ ಧ್ರುವ ಸರ್ಜಾ ಅವರು ಮಕ್ಕಳ ನಾಮಕರಣ ಶಾಸ್ತ್ರ ನಡೆದಿದ್ದು,ಮಕ್ಕಳಿಗೆ ಅರ್ಥಪೂರ್ಣವಾದ ಹೆಸರನ್ನೇ ಇಟ್ಟಿರುವುದು ವಿಶೇಷವಾಗಿದೆ.
ನಟ ಧ್ರುವ ಸರ್ಜಾ ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.
ಇಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡಿದ್ದ, ಅನೇಕ ಮಹಿಳೆಯರು ಇಂದೇ ಧ್ರುವ ಸರ್ಜಾ ಕುಟುಂಬಸ್ಥರು ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ.
ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷವಾಗಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


