ಗುಜರಾತ್: ಗುಜರಾತ್ ನ ಅಮ್ರೇಲಿ ಜಿಲ್ಲೆಯ ಕಾಡಿನಲ್ಲಿ ರೈಲಿಗೆ ಸಿಲುಕಿದ ಸಿಂಹಿಣಿ ಗಂಭೀರವಾಗಿ ಗಾಯಗೊಂಡು ಇಂದು ಚಿಕಿತ್ಸೆ ವೇಳೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವರಿ 20 ರಂದು ಗುಜರಾತ್ ನ ಅಮ್ರೇಲಿ ಜಿಲ್ಲೆಯ ರಾಜುಲಾ ತಾಲೂಕಿನಲ್ಲಿ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದು ಸಿಂಹಿಣಿ ಗಂಭೀರ ಗಾಯಗೊಂಡಿತ್ತು.
ಇದನ್ನು ಹೆಚ್ಚಿನ ಚಿಕಿತ್ಸೆಗಾಗಿ ಜುನಾಗಢ್ ಜಿಲ್ಲೆಯ ಶಕ್ಕರ್ ಬಾಗ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದೆ.


