ಹೈದರಾಬಾದ್: ಅನ್ಯಕೋಮಿನ ವ್ಯಕ್ತಿಯೊಬ್ಬ ಕೇಸರಿ ಧ್ವಜವನ್ನು ಅವಮಾನಿಸುವ ರೀಲ್ ಅಪ್ ಲೋಡ್ ಮಾಡಿದ ಘಟನೆ ನಡೆದಿದೆ. ರೀಲ್ ನಲ್ಲಿ ಯುವಕ ಕೇಸರಿ ಧ್ವಜವನ್ನು ಹಿಡಿದಿದ್ದು ಅದರ ಮೇಲೆ ಹಿಂದೂ ಧಾರ್ಮಿಕ ಚಿಹ್ನೆ ‘ಓಂ’ ಎಂದು ಬರೆಯಲಾಗಿದೆ.
ರೀಲ್ಸ್ ಕಂಡು ಕೋಪಗೊಂಡ ಜನರು ಮೇದಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅವರನ್ನು ಕಂಡು ಥಳಿಸಿ ವೀಡಿಯೊ ಮಾಡಿದ್ದಾರೆ. ವೀಡಿಯೋದಲ್ಲಿ ಗುಂಪು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಂ ಯುವಕನನ್ನು ಥಳಿಸಿ, ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ.
ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಯ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದರೆ, ಇತ್ತ ಹಲ್ಲೆಗೊಳಗಾದ ಯುವಕನೂ ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾನೆ.


