ಬೆಂಗಳೂರು: ಡೇ ಕೇರ್ ಸೆಂಟರ್ ನ 3ನೇ ಮಹಡಿಯಿಂದ ಬಿದ್ದು, ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಕೇರಳ ಮೂಲದ ಟೆಕ್ಕಿ ದಂಪತಿಯ ಪುತ್ರಿ ಜಿನಾ ಮೃತ ಮಗು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಜನವರಿ 22 ರ ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯಗೊಂಡಿದ್ದ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
‘ವಾಸ್ತವಾಂಶ ಮರೆಮಾಡಿ, ಸರಿಯಾದ ಮಾಹಿತಿ ನೀಡದೆ, ನಿರ್ಲಕ್ಷ್ಯ ವಹಿಸಿರುವ ಫ್ರೀ ಸ್ಕೂಲ್ ವಿರುದ್ದ ಮಗುವಿನ ತಂದೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


