ಆಗ್ರ: ಮಹಿಳೆಯೊಬ್ಬರು, ತನ್ನ ಅತ್ತೆ ಅನುಮತಿಯಿಲ್ಲದೆ ತನ್ನ ಮೇಕ್ ಅಪ್ ಬಳಸುತ್ತಿದ್ದಾರೆ ಎಂಬ ಕಾರಣದಿಂದ ಪತಿಯಿಂದ ವಿಚ್ಛೇದನ ಕೇಳಿರುವ ಘಟನೆ ಆಗ್ರದಲ್ಲಿ ನಡೆದಿದೆ.
ಘಟನೆಯ ವಿವರ: ಮಲ್ಪುರ ನಿವಾಸಿಗಳಾದ ಮಹಿಳೆ ಮತ್ತು ಆಕೆಯ ಸಹೋದರಿ ಎಂಟು ತಿಂಗಳ ಹಿಂದೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಗಂಡನ ಮನೆಯಲ್ಲಿ ಅತ್ತೆ ಮಹಿಳೆಯ ಮೇಕ್ ಅಪ್ ನ್ನು ಆಕೆಯ ಅನುಮತಿ ಇಲ್ಲದೇ ಬಳಸುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಅತ್ತೆಯೊಂದಿಗೆ ಮಹಿಳೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ ತನ್ನನ್ನು ಮತ್ತು ತನ್ನ ಸಹೋದರಿಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಯೊಬ್ಬರು ತನ್ನ ಅತ್ತೆ ಅನುಮತಿಯಿಲ್ಲದೆ ತನ್ನ ಮೇಕ್ ಅಪ್ ಬಳಸಿದ ಕಾರಣದಿಂದ ಪತಿಯಿಂದ ವಿಚ್ಛೇದನವನ್ನು ಕೋರಿದ್ದಾರೆ.
ಇದೇ ವಿಷಯವನ್ನು ಅತ್ತೆ, ತನ್ನ ಗಂಡನಿಗೆ ತಿಳಿಸಿದ್ದಾಳೆ. ಇದರಿಂದ ಪತಿ ಕೂಡ ತನ್ನನ್ನು ನಿಂದಿಸಿದ್ದಲ್ಲದೆ, ನಂತರ ಪತಿ ಮತ್ತು ಅತ್ತೆ ಸೇರಿ ತನ್ನನ್ನು ಮತ್ತು ತನ್ನ ಸಹೋದರಿಯನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನ ಪತಿ, ಅತ್ತೆ ಹೇಳುವುದನ್ನು ಮಾತ್ರ ಕೇಳುತ್ತಿದ್ದರಿಂದ ಗಂಡ ತನಗೆ ಗಾರ್ಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಯುವತಿ ದೂರಿದ್ದಾಳೆ. ಹೆಚ್ಚಿನ ಕೌನ್ಸಿಲಿಂಗ್ ಗಾಗಿ ಯುವತಿ ಮತ್ತು ಗಂಡನನ್ನು ಮತ್ತೆ ಕರೆಯುವುದಾಗಿ ಕೌನ್ಸಿಲಿಂಗ್ ಸ್ಪಷ್ಟಪಡಿಸಿದರು.


