ಬೀದರ್: ಬೀದರ್ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಶ್ವಾನ ಪ್ರಿಯರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಬೀದರ್ ನ ನೆಹರೂ ಕ್ರೀಡಾಗಂಣದಲ್ಲಿ ಇಂದು ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ 70 ಕ್ಕೂ ಹೆಚ್ಚು 18 ಜಾತಿಯ ನಾಯಿಗಳು ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಶ್ವಾನ ಪ್ರಿಯರಿಗೆ ಶ್ವಾನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶ್ವಾನ ಪ್ರದರ್ಶನ ನಡೆಸಲಾಗಿದ್ದು, ವಿವಿಧ ಜಾತಿಯ ದೇಶಿ-ವಿದೇಶಿ ತಳಿಯ ಶ್ವಾನಗಳು ಭಾಗಿಯಾಗಿದ್ದವು. ಸ್ವಿಡ್ಜ್, ಫಗ್ಗ, ಪಮೋರಿ, ರ್ಯಾಟ್ ವೀಲರ್, ಪಗ್, ಡ್ಯಾಷ್ ಹೌಂಡ್ ತಳಿಯ ಶ್ವಾನಗಳು ಇದ್ದವು. ಮುಧೋಳ್ ಡಾಗ್, ಲ್ಯಾಬ್ರಡಾರ್, ರಿಟ್ರೈವರ್, ರಾರಯಟ್ ವೀಲರ್, ಪಗ್, ಡ್ಯಾಷ್ ಹೌಂಡ್, ಡಾಬರ್ಮನ್ ಹೀಗೆ ನಾನಾ ತಳಿಯ ಶ್ವಾನಗಳು ಹಾಗೂ ವಿದೇಶಿ ತಳಿಯ ಕೆನೆಕ್ವಾರ್ಸ್, ರಾಟ್ ವ್ಹೀಲರ್, ನಿಯೋ ಪಾಲಿಟನ್ ಮಾಸ್ಟ್ರಿಫ್, ಅಮೆರಿಕನ್ ಬುಲ್, ಡೋಗೊ ಅರ್ಜೆಂಟೀನಾ, ಬೊರ್ ವೆಲ್, ಟರ್ಕಿಸ್ ಕಂಗಾಲ್, ಫಿಲಾ ಬೇರ್ಜಿಲೋ, ಜರ್ಮನ್ ಶೆಫರ್ಡ್, ಗೋಲ್ಡನ್ ರೀಟ್ಟೀಮ್ ಹೀಗೆ 20 ಜಾತಿಯ 120 ಕ್ಕೂ ಹೆಚ್ಚು ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಮಾಲೀಕನ ಆಜ್ಞೆಯನ್ನು ಪಾಲಿಸುವ ಶ್ವಾನಗಳ ಪ್ರದರ್ಶನ, ಪ್ರಾಣಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಇಂದು ಬೀದರ್ ನಲ್ಲಿ ನಡೆದ ದೇಶಿ ವಿದೇಶಿ ನಾಯಿಗಳ ಪ್ರದರ್ಶನ ಪ್ರಾಣಿ ಪ್ರಿಯರನ್ನ ಆಕರ್ಷಿಸಿತು.


