ಆಲ್ಕೋಹಾಲ್ ತ್ಯಜಿಸುವುದರಿಂದ ಇವೆ ಹಲವು ಆರೋಗ್ಯ ಪ್ರಯೋಜನಗಳು:
ಆಲ್ಕೋಹಾಲ್ ಸೇವನೆ ಹೆಚ್ಚಾದಾಗ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುತ್ತದೆ. ಮದ್ಯಪಾನದಿಂದ ದೂರವಿರುವುದು ನಿದ್ರೆ, ಮೆದುಳಿನ ಕಾರ್ಯ ಮತ್ತು ರಕ್ತದೊತ್ತಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲದ ಮದ್ಯಪಾನದಿಂದ ದೂರವಿರುವುದು ಅನೇಕ ವಿಧದ ಕ್ಯಾನ್ಸರ್, ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮದ್ಯಪಾನವನ್ನು ಹಠಾತ್ ನಿಲ್ಲಿಸುವುದರಿಂದಲೂ ಅನೇಕ ವ್ಯತಿರಿಕ್ತ ಪರಿಣಾಮಗಳಿವೆ. ಹೀಗಾಗಿ, ತೀವ್ರ ವ್ಯಸನ ಹೊಂದಿರುವ ಜನರು ಇದ್ದಕ್ಕಿದ್ದಂತೆ ಮದ್ಯವನ್ನು ನಿಲ್ಲಿಸಬಾರದು.
ನೆಲದ ಮೇಲೆ ಮಲಗಿದರೆ ಎಷ್ಟು ಲಾಭ ನೋಡಿ:
ಹಾಸಿಗೆಯ ಮೇಲೆ ಮಲಗುವುದಕ್ಕಿಂತ ನೆಲದ ಮೇಲೆ ಮಲಗುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಕಾರಣಕ್ಕಾಗಿಯೇ ತಜ್ಞರು ನೆಲದ ಮೇಲೆ ನಿದ್ರಿಸಲು ಸಲಹೆ ನೀಡುತ್ತಾರೆ. ನೆಲದಂತಹ ಗಟ್ಟಿಯಾದ ಮೇಲ್ಕೆಗಳು ನೈಸರ್ಗಿಕವಾಗಿ ದೇಹಕ್ಕೆ ವ್ಯಾಯಾಮ ನೀಡುತ್ತವೆ. ನೆಲದ ಮೇಲೆ ಮಲಗಿದಾಗ ಬೆನ್ನು ಮೂಳೆ ನೇರವಾಗಿರುತ್ತದೆ. ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ನೆಲದ ಮೇಲೆ ಮಲಗಿದರೆ ಉತ್ತಮ ರಕ್ತ ಪರಿಚಲನೆಯಾಗುತ್ತದೆ ಜೊತೆಗೆ ದೇಹದ ತೂಕ ಸಮಾನವಾಗಿರುತ್ತದೆ.
ದಿನಕ್ಕೆ 4-5 ಲೀಟರ್ ನೀರು ಕುಡಿಯಬೇಕು:
ಸಾಕಷ್ಟು ನೀರು ಕುಡಿಯುವುದು ನಿಮ್ಮ ಬಾಯಾರಿಕೆಯನ್ನು ತಣಿಸುವುದಕ್ಕಿಂತ ಹೆಚ್ಚಿನ ಆರೋಗ್ಯ ಲಾಭವನ್ನು ನೀಡುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ. ಗಂಟೆಗೆ ಒಮ್ಮೆಯಾದರೂ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ನಿಮ್ಮ ಚರ್ಮವು ನಿರ್ಜೀವ ಮತ್ತು ಮಂದವಾಗಿ ಕಾಣುತ್ತಿದ್ದರೆ, ನೀವು ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುತ್ತಿಲ್ಲ ಎಂದು ಅರ್ಥ. ಈ ಕಾರಣಗಳಿಂದಲೇ ಪ್ರತಿದಿನ ಕನಿಷ್ಠ 4 ರಿಂದ 5 ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು.
ಮಲಗುವ ವೇಳೆ ಈ ಹಣ್ಣುಗಳನ್ನು ತಿನ್ನಬೇಡಿ:
ಹಣ್ಣುಗಳು ನಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶಗಳನ್ನು ನೀಡುತ್ತೆ. ಸಾಮಾನ್ಯವಾಗಿ ಎಲ್ಲ ಹಣ್ಣುಗಳು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ವೇಳೆ ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಿತ್ತಳೆ ಹಾಗೂ ದ್ರಾಕ್ಷಿ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ನಾರಿನ ಪ್ರಮಾಣ ಹೆಚ್ಚಾಗಿರುತ್ತೆ. ಇದು ಗ್ಯಾಸ್ಟ್ರಿಕ್ ಹಾಗೂ ನಿದ್ರೆಯ ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ರಾತ್ರಿ ಮಲಗುವ ವೇಳೆ ಈ ಹಣ್ಣುಗಳ ಸೇವನೆ ಮಾಡಬೇಡಿ.
ತೂಕ ಇಳಿಕೆಗೆ ಸಹಕಾರಿ ಬಿಳಿ ಬದನೆ:
ನೀವು ತೂಕ ಇಳಿಸುವ ಯೋಜನೆಯಲ್ಲಿದ್ದರೆ, ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಬಿಳಿಬದನೆ ಸೇರಿಸಿ. ಇದು ಕ್ಯಾಲೋರಿಗಳಲ್ಲಿ ಕಡಿಮೆ ಆದರೆ ಫೈಬರ್ ನಲ್ಲಿ ಹೆಚ್ಚು ಅಂಶಗಳನ್ನು ಹೊಂದಿದೆ. ಬಿಳಿಬದನೆ ಸೇವನೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಮತ್ತು ದೀರ್ಘಕಾಲದವರೆಗೆ ಹಸಿವಿನ ಭಾವನೆಯನ್ನು ತಡೆಯುತ್ತದೆ. ಅದರ ಫೈಬರ್ ಅಂಶವು ಅತ್ಯುತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಈ ಮೂಲಕ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


