ಟೋಲ್ ಕಟ್ಟಲು ನಗದು ಪಾವತಿ ಬದಲು ಕೇಂದ್ರ ಸರ್ಕಾರ ಡಿಜಿಟಲ್ ವ್ಯವಸ್ಥೆಯಾದ ಫಾಸ್ಟಾಗ್ ಜಾರಿ ಮಾಡಿದೆ. ಇದೀಗ ಎಲ್ಲೆಡೆ ಫಾಸ್ಟಾಗ್ ಮೂಲಕವೇ ಟೋಲ್ ಹಣ ಸಂಗ್ರಹ ಮಾಡಲಾಗುತ್ತಿದೆ.
ಇತ್ತೀಚಿಗೆ ಒಂದೇ ವಾಹನದ ಫಾಸ್ಟಾಗ್ ನ್ನು ಬದಲಿ ವಾಹನಗಳಿಗೆ ಬಳಸುತ್ತಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸರ್ಕಾರ ಹೊಸ ನೀತಿಯಡಿ ಕೆವೈಸಿ ಕಡ್ಡಾಯ ಮಾಡಿತ್ತು.
ಇಂದಿನಿಂದ ಅಂದರೆ ಫೆಬ್ರವರಿ 1 ರಿಂದ ಕೆವೈಸಿ ಆಗದ ಫಾಸ್ಟಾಗ್ ನಿಷ್ಕ್ರಿಯಗೊಳ್ಳಲಿದೆ. KYC ಪೂರ್ಣಗೊಂಡಾಗ ಮಾತ್ರ ಫಾಸ್ಟಾಗ್ ಮೂಲಕ ಟೋಲ್ ಪಾವತಿ ಮಾಡಲು ಸಾಧ್ಯವಾಗುತ್ತದೆ. KYC ಮಾಡಿಸಲು ನಿನ್ನೆ ಕೊನೆಯ ದಿನವಾಗಿತ್ತು.


