nammatumakuru

    Subscribe to Updates

    Get the latest creative news from FooBar about art, design and business.

    What's Hot

     ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?

    October 21, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ

    October 21, 2026
    Facebook Twitter Instagram
    ಟ್ರೆಂಡಿಂಗ್
    •  ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?
    • ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?
    • ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ
    • ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ ಇಲಾಖೆ ನಿಯಮಗಳೇನು ?
    • ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್’ ಕಾರ್ಣಿಕದ ಅರ್ಥವೇನು? ಯೋಗಿ ಆದಿತ್ಯನಾಥ್‌ ಪ್ರಧಾನಿ ಆಗ್ತಾರಾ?
    • ಮಳೆ ಬಗ್ಗೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ:  ಶ್ರೀಗಳು ನೀಡಿದ ಎಚ್ಚರಿಕೆ ಏನು?
    • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, ಇಬ್ಬರ ಬಂಧನ
    • ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತುಮಕೂರಿನ ಸಾಧನೆ: ನಕ್ಷೆಯ ಆಕಾರದ ಮಾನವಾಕೃತಿಯಲ್ಲಿ ಸಾಮೂಹಿಕ ನೃತ್ಯ ಮತ್ತು ಗಾಯನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಕ್ಕಳ ಉತ್ತಮ ನಡವಳಿಕೆಗಾಗಿ ಈ ಟಿಪ್ ಅನುಸರಿಸಿ: ನಿಮ್ಮ ಮಕ್ಕಳು ನಿಮ್ಮ ಮಾತು ಕೇಳಿಯೇ ಕೇಳುತ್ತಾರೆ
    ರಾಜ್ಯ ಸುದ್ದಿ February 3, 2024

    ಮಕ್ಕಳ ಉತ್ತಮ ನಡವಳಿಕೆಗಾಗಿ ಈ ಟಿಪ್ ಅನುಸರಿಸಿ: ನಿಮ್ಮ ಮಕ್ಕಳು ನಿಮ್ಮ ಮಾತು ಕೇಳಿಯೇ ಕೇಳುತ್ತಾರೆ

    By adminFebruary 3, 2024No Comments2 Mins Read
    good behave

    ಸಾಮಾನ್ಯವಾಗಿ ಮಕ್ಕಳಿಗೆ 6 ವರ್ಷ ತುಂಬಿದ್ರೆ ಸಾಕು, ಎದುರುತ್ತರ ಕೊಡುತ್ತಾರೆ ಅನ್ನೋ ಮಾತುಗಳನ್ನು ಹೆಚ್ಚಿನ ಪೋಷಕರು ಹೇಳುತ್ತಾರೆ. ಕೆಲವು ಪೋಷಕರು ನಮ್ಮ ಮಕ್ಕಳು ನಮ್ಮ ಯಾವುದೇ ಮಾತನ್ನು ಕೇಳುವುದಿಲ್ಲ ಎನ್ನುವ ದೂರು ಹೇಳುವುದನ್ನು ನೀವು ಕೇಳಿರಬಹುದು.

    ಹೌದು, ಮಕ್ಕಳು ಬೆಳೆದಂತೆ ಅವರ ನಡವಳಿಕೆಯಲ್ಲಿ ಬದಲಾವಣೆಗಳು ಕಂಡು ಬರುವುದು ಸಹಜ. ಯಾಕೆಂದರೆ   ಬೆಳೆಯುತ್ತಿರುವ ಮಕ್ಕಳಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಲವು ಬದಲಾವಣೆಗಳನ್ನು ಕಾಣಬಹುದು. ಅಂತಹ ಬದಲಾವಣೆಗಳಲ್ಲಿ ಮಕ್ಕಳು ಎದುರುತ್ತರ ಕೊಡುವ ಸ್ವಭಾವವೂ ಒಂದು. ಮೊದಲಿಗೆ ಮಕ್ಕಳ ಈ ಎದುರುತ್ತರ ಕೊಡುವ ಸ್ವಭಾವ ಸ್ವಾಭಾವಿಕ ಎಂದೆನಿಸಿದರೂ ಬರುಬರುತ್ತಾ ಇದು ಪೋಷಕರ ಕೋಪವನ್ನು ಹೆಚ್ಚಿಸಬಹುದು.

    ಮಕ್ಕಳ ಈ ಸ್ವಭಾವವನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದಬೇಕಾಗುತ್ತದೆ. ಅವರನ್ನು ಬೈಯುವ ಬದಲಿಗೆ ಅವರ ಸ್ವಭಾವವನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲು ಪ್ರಯತ್ನ ಪಡಿ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ದಂಡಿಸುವಷ್ಟು ಸುಲಭವಾಗಿ ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರಶಂಸಿಸುವುದಿಲ್ಲ. ಆದ್ದರಿಂದ ಪೋಷಕರು ಮಕ್ಕಳು ಒಂದು ಸಣ್ಣ ಕೆಲಸವನ್ನು ಸರಿಯಾಗಿ ಮಾಡಿದರೂ ಪ್ರಶಂಸಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ವೆರಿ ಗುಡ್‌ ಅನ್ನಬೇಕು. ಇದು ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ಅವರ ನೈತಿಕತೆಯನ್ನು ಕೂಡ ಹೆಚ್ಚಿಸುತ್ತದೆ.

    ಕೆಲವೊಮ್ಮೆ ಪೋಷಕರು ಒತ್ತಡದಿಂದ ಇರುವುದರಿಂದಲೋ ಏನೋ ನಿಮ್ಮ ಮಗು ಸುಮ್ಮನೆ ಬೇಸರದಿಂದ ಕುಳಿತಿದೆ ಎನ್ನುತ್ತಾ ಟಿವಿ ಅಥವಾ ಮೊಬೈಲ್ ಲನ್ನು ಹಾಕಿ ಕೊಡಬಹುದು. ಇದರಿಂದ ಅವರ ಈ ಅಭ್ಯಾಸವನ್ನು ತಪ್ಪಿಸಲು   ಬೈಯುವ ಬದಲಿಗೆ ಸೃಜನಶೀಲ ಕೆಲಸವನ್ನು ಮಾಡಲು ಪ್ರೇರೇಪಿಸಬೇಕು. ಅವರ ಮನಸ್ಸು ಸಕಾರಾತ್ಮಕವಾಗಿದ್ದರೆ, ಅವರು ನೀವು ಹೇಳುವುದನ್ನು ಕೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಈ ವೇಗದ ಜೀವನಶೈಲಿಯಲ್ಲಿ ಪೋಷಕರಿಗೆ ಮಕ್ಕಳೊಂದಿಗೆ ಕುಳಿತು ಆಟವಾಡಲು, ಅವರ ಮಾತುಗಳನ್ನು ಕೇಳಲು ಸಮಯವೇ ಇರುವುದಿಲ್ಲ. ಆದರೆ, ನಿಮ್ಮ ಮಕ್ಕಳು ಒಳ್ಳೆಯ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ನೀವು ಬಯಸಿದರೆ, ನಿತ್ಯ ಸ್ವಲ್ಪ ಸಮಯವನ್ನು ನಿಮ್ಮ ಮಕ್ಕಳಿಗಾಗಿ ಮೀಸಲಿಡಿ. ಅವರೊಂದಿಗೆ ಒಂದೆರಡು ಪ್ರೀತಿಯ ಮಾತುಗಳನ್ನು ಆಡಿ.  ಇದು ಅವರ ತಪ್ಪುಗಳನ್ನು ತಿದ್ದಲು ಸಹಾಯಕವಾಗುವುದರ ಜೊತೆಗೆ ಪೋಷಕರು ನಮ್ಮೊಂದಿಗೆ ಇದ್ದಾರೆ ಎಂಬ ಆತ್ಮಸ್ಥೈರ್ಯವನ್ನು ಕೂಡ ಹೆಚ್ಚಿಸುತ್ತದೆ.

    ಇನ್ನೊಂದು ವಿಚಾರವೆಂದರೆ ಹೆಚ್ಚಿನ ಪೋಷಕರು ಮಾಡುವ ಸಾಮಾನ್ಯವಾದ ತಪ್ಪು ಏನೆಂದರೆ,  ಅವರ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವುದು. ಆದರೆ, ನಿಮ್ಮ ಮಕ್ಕಳನ್ನು ಯಾವತ್ತೂ ಬೇರೆ ಮಕ್ಕಳೊಂದಿಗೆ ಹೋಲಿಸಬಾರದು. ನಿಮ್ಮ ಮಕ್ಕಳ ಆಸಕ್ತಿ ಕ್ಷೇತ್ರ ಬೇರೆಯದ್ದೇ ಇರಬಹುದು. ಆದ್ದರಿಂದ ಮಕ್ಕಳನ್ನು ಇತರರೊಂದಿಗೆ ಹೋಲಿಸಿದಾಗ,ಅವರಿಗೆ ಬೇಸರವಾಗಬಹುದು. ಆಸಕ್ತಿ ಕುಂದಬಹುದು. ಹಾಗಾಗಿ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಮಹತ್ವ ನೀಡಿ.. ಅವರೊಂದಿಗೆ ಸಾಧ್ಯವಾದಷ್ಟು ಕಾಲ ಕಳೆಯಿರಿ. ಯಾಕೆಂದ್ರೆ ಪ್ರತಿಯೊಬ್ಬ ತಂದೆ ತಾಯಿಗೂ ಮಕ್ಕಳೇ ಪ್ರಪಂಚ ಆಗಿರ್ತಾರೆ ಅನ್ನೋದು ಸುಳ್ಳಲ್ಲ.

     

    admin
    • Website

    Related Posts

     ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?

    October 21, 2026

    ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್’ ಕಾರ್ಣಿಕದ ಅರ್ಥವೇನು? ಯೋಗಿ ಆದಿತ್ಯನಾಥ್‌ ಪ್ರಧಾನಿ ಆಗ್ತಾರಾ?

    October 21, 2026

    ಮಳೆ ಬಗ್ಗೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ:  ಶ್ರೀಗಳು ನೀಡಿದ ಎಚ್ಚರಿಕೆ ಏನು?

    October 20, 2026

    Comments are closed.

    Our Picks

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

     ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?

    October 21, 2026

    ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಮುಂಬರುವ ಅಕ್ಟೋಬರ್‌–ನವೆಂಬರ್‌ ಬಿಲ್ಲಿಂಗ್ ಅವಧಿಯಲ್ಲಿ ಪ್ರತಿ ಯೂನಿಟ್…

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ವಾರಂಟಿ ಬೇರೆ, ಗ್ಯಾರಂಟಿ ಬೇರೆ! ಹೊಸ ವಸ್ತು ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ

    October 21, 2026

    ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಆದಾಯ ತೆರಿಗೆ ಇಲಾಖೆ ನಿಯಮಗಳೇನು ?

    October 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.