ಬೆಂಗಳೂರು: ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ.
ರಿತಿಕ್ ರಾಜ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪಿ. ಜಾರ್ಖಂಡ್ ನಿಂದ ನಗರಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು. ಪೋಸ್ಟ್ ಮೂಲಕ ನಗರದ ವಿವಿಧ ಭಾಗಗಳಿಗೆ ಡ್ರಗ್ಸ್ ಸರಬರಾಜು ಮಾಡಲಾಗುತಿತ್ತು.
ಖಚಿತ ಮಾಹಿತಿ ಮೇರೆಗೆ ಬರುತ್ತಿದ್ದ ಪೋಸ್ಟ್ ಅನ್ನು ಟ್ರ್ಯಾಪ್ ಮಾಡಿದ ಸಿಸಿಬಿ ಪೊಲೀಸರು, ಬಳಿಕ ಪೋಸ್ಟ್ ಡೆಲಿವರಿ ಆಗುವ ಜಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಗರಕ್ಕೆ ಚರಸ್ ಡ್ರಗ್ಸ್ ನ್ನು, ಗಿಫ್ಟ್ ಬಾಕ್ಸ್ ರೂಪದಲ್ಲಿ ಕಳುಹಿಸಲಾಗಿತ್ತು. ನಂತರ ಬಂದಿದ್ದ ಬಾಕ್ಸ್ ಗಳನ್ನು ಆರೋಪಿಯಿಂದಲೇ ಪೊಲೀಸರು ತೆಗೆಸಿದ್ದಾರೆ.
ಬಾಕ್ಸ್ ತೆಗೆದು ನೋಡಿದ ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಇವುಗಳನ್ನು ಋಷಿಕೇಶದಿಂದ ಪೋಸ್ಟ್ ಮೂಲಕ ಕಳುಹಿಸಲಾಗಿದ್ದು, ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ಎಂಬವನು ಪಾರ್ಸೆಲ್ ಮಾಡಿದ್ದನು. ಸದ್ಯ ಅದಿತ್ ತಲೆಮರೆಸಿಕೊಂಡಿದ್ದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


