ಕೊಡಗು: ಯುವಕನೊಬ್ಬ ಎನರ್ಜಿ ಡ್ರಿಂಕ್ ರೆಡ್ ಬುಲ್ ಕುಡಿದು ಅಸ್ವಸ್ಥಗೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ. ವಿನೋದ್ (27)ಅಸ್ವಸ್ಥಗೊಂಡ ಯುವಕನಾಗಿದ್ದಾನೆ.
ಅಸ್ವಸ್ಥಗೊಂಡ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿನೋದ್ ಎಂಬ ಯುವಕ ಮಡಿಕೇರಿಯ ಶಾಪ್ ಒಂದರಿಂದ ಎನರ್ಜಿ ಡ್ರಿಂಕ್ ಖರೀದಿಸಿ ಕುಡಿದಿದ್ದ ಎನ್ನಲಾಗಿದ್ದು, ರೆಡ್ ಬುಲ್ ಟಿನ್ ಒಳಗೆ ಲೋಳೆಯಂತ ವಸ್ತು ಪತ್ತೆಯಾಗಿದೆ. ಘಟನೆ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎನರ್ಜಿ ಡ್ರಿಂಕ್ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.


