ಸರಗೂರು: ಫೆ.26ರ ಸೋಮವಾರದಿಂದ ಫೆ.೨28ರವರೆಗೆ ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಆಚರಿಸಲು ಜಾತ್ರಾ ಕಮಿಟಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲ್ಲೂಕಿನ ಸಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದೇಗಾಲ ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಕಮಿಟಿ ಅಧ್ಯಕ್ಷ ಮತ್ತು ಸರ್ವಸದಸ್ಯರು ಸುತ್ತಮುತ್ತಲಿನ ಗ್ರಾಮದ ಮುಖಂಡರೊಂದಿಗೆ ಮಂಗಳವಾರ ದಂದು ನಡೆದ ಸಭೆಯಲ್ಲಿ ಫೆ.26ರಿಂದ ಫೆ.28ರ ವರೆಗೆ ಮಹದೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುವುದಾಗಿ ಎಂದು ಕಮಿಟಿಯವರು ತೀರ್ಮಾನಿಸಲಾಯಿತು.
ಪೂರ್ವಭಾವಿ ಸಭೆ ನಡೆಸಿದ ಅವರು, ‘ಜಾತ್ರಾ ದಿನಗಳಂದು 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಅವರ ಸೌಕರ್ಯಕ್ಕೆ ಕೊರತೆಯಾಗದಂತೆ ಈಗಿನಿಂದಲೇ ಅವಶ್ಯ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ’ ಎಂದರು.
ಜಿಲ್ಲೆಯ ವಿವಿಧ ತಾಲ್ಲೂಕಿನ ಭಾಗಗಳಲ್ಲದೆ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚು ಬಸ್‌ಗಳನ್ನು ನಿಯೋಜಿಸಬೇಕು. ಕಳೆದ ಬಾರಿಗಿಂತ ಕನಿಷ್ಠ ಶೇ 10ರಷ್ಟು ಬಸ್‌ಗಳನ್ನು ಹೆಚ್ಚು ಮಾಡಬೇಕಿದೆ’ ಎಂದರು.
ಜಾತ್ರಾ ಗೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಸಮಿತಿವರು ನೀರು ಸಂಗ್ರಹಗಾರ, ಶುದ್ಧ ಕುಡಿಯುವ ನೀರಿನ ಘಟಕ, ತೊಂಬೆ ಮತ್ತಿತರ ಮೂಲಗಳಿಂದ ನೀರು ಸರಬರಾಜು ಮಾಡಬೇಕು. ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗಾಗಿ ಕುಡಿಯುವ ನೀರಿನ ಟ್ಯಾಂಕುಗಳನ್ನು ಇಡಬೇಕು. ವಿವಿಧ ಸ್ಥಳಗಳಲ್ಲಿ ನಲ್ಲಿಗಳ ಮೂಲಕವೂ ನೀರು ಪೂರೈಸಬೇಕು’ ಎಂದು ಅವರು ಸೂಚಿಸಿದರು.
ದಾಸೋಹ ವ್ಯವಸ್ಥೆ: ಲಕ್ಷಾಂತರ ಭಕ್ತರು ಬರುವುದರಿಂದ ನಿರಂತರ ದಾಸೋಹ ಒದಗಿಸಬೇಕು. ವಾಸ್ತವ್ಯಕ್ಕಾಗಿ ಅಗತ್ಯ ನೆರಳಿನ ವ್ಯವಸ್ಥೆ ಮಾಡಬೇಕು. ವಿಶೇಷ ದಾಸೋಹ ನಿರ್ವಹಣೆಗೆ ಶಾಮಿಯಾನ ಅಳವಡಿಸಬೇಕು’ ಎಂದರು.
ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ವಾಹನಗಳ ಸಂಚಾರ, ನಿಲುಗಡೆಗೆ ಕ್ರಮ ತೆಗೆದುಕೊಳ್ಳಬೇಕು. ಭಕ್ತರಿಗೆ ಮಾಹಿತಿ ನೀಡಲು ತಾತ್ಕಾಲಿಕ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ವಿದ್ಯುತ್ ಅಡಚಣೆಯಾಗದಂತೆಯೂ ಗಮನ ಹರಿಸಲು ಅವರು ನಿರ್ದೇಶನ ಸಮಿತಿ ಸದಸ್ಯರಿಗೆ ನೀಡಿದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಹಾಗೂ ಇತರೆ ಮನರಂಜನಾ ಮತ್ತು ಧನಗಳ ಜಾತ್ರೆ ಇನ್ನೂ ಮುಂತಾದ .ಕಾರ್ಯಕ್ರಮ ಮುಖಾಂತರ ಅದ್ದೂರಿ ಜಾತ್ರೆ ನಡೆಸಲು ತಾಲ್ಲೂಕಿನ ಜನತೆ ಹಾಗೂ ಎಲ್ಲಾ ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಪಾಟೀಲ್ ರಾಜಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಮುಖಂಡರಾದ ಚಿಕ್ಕವೀರನಾಯಕ, ರಾಜಪ್ಪ, ಗುರುಮಲ್ಲಪ್ಪ, ಚೆನ್ನರಾಜಪ್ಪ, ಸೋಮಣ್ಣ, ಕಾಳಸ್ವಾಮಿ, ಲಕ್ಷ್ಮಣಚಾರ್, ಪುಟ್ಟಯ್ಯ, ಶಿವಲಿಂಗಯ್ಯ, ಪುಟ್ಟಸಿದ್ದಯ್ಯ, ಎಚ್.ಎನ್.ಸುಧೀರ್, ಮರಿದಾಸ್, ದಾಸಪ್ಪ, ಅನಿತಾ ರಾಜ್ ಅರಸ್, ಕೆ.ವಿ.ರುದ್ರಯ್ಯ, ಮಹದೇವಪ್ಪ, ನಾರಾಯಣ್ ಸೇರಿದಂತೆ ಕಂದೇಗಾಲ, ಗದ್ದೇಹಳ್ಳ, ಸಾಗರೆ, ಬಿದರಹಳ್ಳಿ, ನಂದಿನಾಥಪುರ, ಚೆನ್ನೀಪುರ, ಹೆಗ್ಗನೂರು, ತೆಲಗುಮಸಹಳ್ಳಿ ಮುಂತಾದ ಗ್ರಾಮಗಳ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ


