nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂದೇ ದೃಶ್ಯಕ್ಕೆ ಇಷ್ಟೊಂದು ಖರ್ಚಾ? ‘ರಾಮಾಯಣ’ ಚಿತ್ರದ ರಥದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ!

    November 7, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

    ಸಾವಿನ ಬಳಿಕ 13 ದಿನ ಆತ್ಮ ಮನೆಯಲ್ಲೇ ಇರುತ್ತದೆಯೇ? 

    November 7, 2026
    Facebook Twitter Instagram
    ಟ್ರೆಂಡಿಂಗ್
    • ಒಂದೇ ದೃಶ್ಯಕ್ಕೆ ಇಷ್ಟೊಂದು ಖರ್ಚಾ? ‘ರಾಮಾಯಣ’ ಚಿತ್ರದ ರಥದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ!
    • ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?
    • ಸಾವಿನ ಬಳಿಕ 13 ದಿನ ಆತ್ಮ ಮನೆಯಲ್ಲೇ ಇರುತ್ತದೆಯೇ? 
    • ತಿಪಟೂರು: ನೂತನ ಕನಕ ಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಭರವಸೆ
    • ಸೋನಾಳ ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ವಿಬಿ–ಜಿ ರಾಮ್ ಜಿ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ಮುಟ್ಟಲಿ: ಸೂರ್ಯಕಾಂತ ಎಕಲಾರ
    • ಮಧುಗಿರಿ: ಪಟ್ಟಣದಲ್ಲಿ ಹೊಸ ಬಾರ್‌ ಗಳಿಗೆ ಅನುಮತಿ ಬೇಡ: ಡಾ. ಕೆ.ಎಸ್. ಪಾಂಡುರಂಗಾರೆಡ್ಡಿ
    • ಹಲ್ಕುರಿಕೆ ಕೆರೆಗೆ ನೀರು: ನ.23ರ ಗಡುವು | ನೀರು ಹರಿಸದಿದ್ದರೆ ಬೃಹತ್ ಪಾದಯಾತ್ರೆ: ಜೆಡಿಎಸ್ ಮುಖಂಡ ಶಾಂತ್ ಕುಮಾರ್ ಎಚ್ಚರಿಕೆ
    • ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಫೆ.26ರಿಂದ 28ರವರೆಗೆ ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
    ಜಿಲ್ಲಾ ಸುದ್ದಿ February 11, 2024

    ಫೆ.26ರಿಂದ 28ರವರೆಗೆ ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

    By adminFebruary 11, 2024No Comments2 Mins Read
    kandegala

    ಸರಗೂರು:  ಫೆ.26ರ ಸೋಮವಾರದಿಂದ ಫೆ.೨28ರವರೆಗೆ  ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಆಚರಿಸಲು ಜಾತ್ರಾ ಕಮಿಟಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

    ತಾಲ್ಲೂಕಿನ ಸಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದೇಗಾಲ ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ  ಪೂರ್ವಭಾವಿ ಸಭೆಯಲ್ಲಿ ಕಮಿಟಿ ಅಧ್ಯಕ್ಷ ಮತ್ತು ಸರ್ವಸದಸ್ಯರು ಸುತ್ತಮುತ್ತಲಿನ ಗ್ರಾಮದ ಮುಖಂಡರೊಂದಿಗೆ ಮಂಗಳವಾರ ದಂದು ನಡೆದ ಸಭೆಯಲ್ಲಿ  ಫೆ.26ರಿಂದ ಫೆ.28ರ ವರೆಗೆ ಮಹದೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುವುದಾಗಿ ಎಂದು ಕಮಿಟಿಯವರು ತೀರ್ಮಾನಿಸಲಾಯಿತು.

    ಪೂರ್ವಭಾವಿ ಸಭೆ ನಡೆಸಿದ ಅವರು, ‘ಜಾತ್ರಾ ದಿನಗಳಂದು 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಅವರ ಸೌಕರ್ಯಕ್ಕೆ ಕೊರತೆಯಾಗದಂತೆ ಈಗಿನಿಂದಲೇ ಅವಶ್ಯ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ’ ಎಂದರು.

    ಜಿಲ್ಲೆಯ ವಿವಿಧ ತಾಲ್ಲೂಕಿನ ಭಾಗಗಳಲ್ಲದೆ  ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚು ಬಸ್‌ಗಳನ್ನು ನಿಯೋಜಿಸಬೇಕು. ಕಳೆದ ಬಾರಿಗಿಂತ ಕನಿಷ್ಠ ಶೇ 10ರಷ್ಟು ಬಸ್‌ಗಳನ್ನು ಹೆಚ್ಚು ಮಾಡಬೇಕಿದೆ’ ಎಂದರು.

    ಜಾತ್ರಾ ಗೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಸಮಿತಿವರು ನೀರು ಸಂಗ್ರಹಗಾರ, ಶುದ್ಧ ಕುಡಿಯುವ ನೀರಿನ ಘಟಕ, ತೊಂಬೆ ಮತ್ತಿತರ ಮೂಲಗಳಿಂದ ನೀರು ಸರಬರಾಜು ಮಾಡಬೇಕು. ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗಾಗಿ  ಕುಡಿಯುವ ನೀರಿನ ಟ್ಯಾಂಕುಗಳನ್ನು ಇಡಬೇಕು. ವಿವಿಧ ಸ್ಥಳಗಳಲ್ಲಿ ನಲ್ಲಿಗಳ ಮೂಲಕವೂ ನೀರು ಪೂರೈಸಬೇಕು’ ಎಂದು ಅವರು ಸೂಚಿಸಿದರು.

    ದಾಸೋಹ ವ್ಯವಸ್ಥೆ: ಲಕ್ಷಾಂತರ ಭಕ್ತರು ಬರುವುದರಿಂದ ನಿರಂತರ ದಾಸೋಹ ಒದಗಿಸಬೇಕು. ವಾಸ್ತವ್ಯಕ್ಕಾಗಿ ಅಗತ್ಯ ನೆರಳಿನ ವ್ಯವಸ್ಥೆ ಮಾಡಬೇಕು. ವಿಶೇಷ ದಾಸೋಹ ನಿರ್ವಹಣೆಗೆ ಶಾಮಿಯಾನ ಅಳವಡಿಸಬೇಕು’ ಎಂದರು.

    ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ವಾಹನಗಳ ಸಂಚಾರ, ನಿಲುಗಡೆಗೆ ಕ್ರಮ ತೆಗೆದುಕೊಳ್ಳಬೇಕು. ಭಕ್ತರಿಗೆ ಮಾಹಿತಿ ನೀಡಲು ತಾತ್ಕಾಲಿಕ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ವಿದ್ಯುತ್ ಅಡಚಣೆಯಾಗದಂತೆಯೂ ಗಮನ ಹರಿಸಲು ಅವರು ನಿರ್ದೇಶನ ಸಮಿತಿ ಸದಸ್ಯರಿಗೆ ನೀಡಿದರು.

    ಸಾಂಸ್ಕೃತಿಕ ಹಾಗೂ ಕ್ರೀಡಾ ಹಾಗೂ ಇತರೆ ಮನರಂಜನಾ ಮತ್ತು ಧನಗಳ ಜಾತ್ರೆ ಇನ್ನೂ ಮುಂತಾದ .ಕಾರ್ಯಕ್ರಮ ಮುಖಾಂತರ ಅದ್ದೂರಿ ಜಾತ್ರೆ ನಡೆಸಲು ತಾಲ್ಲೂಕಿನ ಜನತೆ ಹಾಗೂ ಎಲ್ಲಾ ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಪಾಟೀಲ್ ರಾಜಪ್ಪ ತಿಳಿಸಿದರು.

    ಈ ಸಂದರ್ಭದಲ್ಲಿ ಸಭೆಯಲ್ಲಿ ಮುಖಂಡರಾದ ಚಿಕ್ಕವೀರನಾಯಕ, ರಾಜಪ್ಪ, ಗುರುಮಲ್ಲಪ್ಪ, ಚೆನ್ನರಾಜಪ್ಪ, ಸೋಮಣ್ಣ, ಕಾಳಸ್ವಾಮಿ,  ಲಕ್ಷ್ಮಣಚಾರ್, ಪುಟ್ಟಯ್ಯ, ಶಿವಲಿಂಗಯ್ಯ, ಪುಟ್ಟಸಿದ್ದಯ್ಯ, ಎಚ್.ಎನ್.ಸುಧೀರ್, ಮರಿದಾಸ್, ದಾಸಪ್ಪ, ಅನಿತಾ ರಾಜ್ ಅರಸ್, ಕೆ.ವಿ.ರುದ್ರಯ್ಯ, ಮಹದೇವಪ್ಪ, ನಾರಾಯಣ್ ಸೇರಿದಂತೆ ಕಂದೇಗಾಲ, ಗದ್ದೇಹಳ್ಳ, ಸಾಗರೆ, ಬಿದರಹಳ್ಳಿ, ನಂದಿನಾಥಪುರ, ಚೆನ್ನೀಪುರ, ಹೆಗ್ಗನೂರು, ತೆಲಗುಮಸಹಳ್ಳಿ ಮುಂತಾದ ಗ್ರಾಮಗಳ ಮುಖಂಡರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ

    admin
    • Website

    Related Posts

    ಸೋನಾಳ ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ವಿಬಿ–ಜಿ ರಾಮ್ ಜಿ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ಮುಟ್ಟಲಿ: ಸೂರ್ಯಕಾಂತ ಎಕಲಾರ

    November 7, 2026

    ಹೊಲದಲ್ಲಿ ಬೆಳೆದಿದ್ದ ₹9.5 ಲಕ್ಷ ಮೌಲ್ಯದ ಗಾಂಜಾ ಗಿಡ ಜಪ್ತಿ: ಇಬ್ಬರು ಆರೋಪಿಗಳ ಬಂಧನ

    November 6, 2026

    ಬೀದರ್: ಬಸ್ ಹಾಗೂ ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ತೀವ್ರ ಪ್ರತಿಭಟನೆ

    November 6, 2026

    Comments are closed.

    Our Picks

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ಒಂದೇ ದೃಶ್ಯಕ್ಕೆ ಇಷ್ಟೊಂದು ಖರ್ಚಾ? ‘ರಾಮಾಯಣ’ ಚಿತ್ರದ ರಥದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ!

    November 7, 2026

    ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ…

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

    ಸಾವಿನ ಬಳಿಕ 13 ದಿನ ಆತ್ಮ ಮನೆಯಲ್ಲೇ ಇರುತ್ತದೆಯೇ? 

    November 7, 2026

    ತಿಪಟೂರು: ನೂತನ ಕನಕ ಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಭರವಸೆ

    November 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.