ತಿಪಟೂರು: ಹೋನವಳ್ಳಿ ಹೋಬಳಿಯ ಮತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರೆಗುಡಿ ಗ್ರಾಮ ದೇವತೆ ಶ್ರೀ ಬಿದಿರಮ್ಮ ಶ್ರೀ ಚಿಕ್ಕಮ್ಮ ದೇವಿಯವರ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವವು ಇಂದು ನಡೆಯಿತು.
ಇಂದು ಬೆಳಗ್ಗೆ ದೇವತೆಗಳ ಮೆರವಣಿಗೆ ನಡೆಸಿ, ಉಯ್ಯಾಲೆ ಆಡಿಸಿ, ಚಿಕ್ಕಮ್ಮ ದೇವರ ಪುಟ್ಟ ಬಾಲಕನಿಗೆ ಕರಗ ವರಿಸಿ ದೇವಸ್ಥಾನದ ಸುತ್ತ ಕರಗವನ್ನು ಸುತ್ತರಿಸಿ ನಂತರ ಭಕ್ತರಿಗೆ ಎಲ್ಲರಿಗೂ ದೇವರ ದರ್ಶನ ಪಡೆಯಲು ಅವಕಾಶ ನೀಡಿದ್ದು ನಿಯಮಾನುಸಾರ ಜಾತ್ರಾ ಮಹೋತ್ಸವ ನೆರವೇರಿತು
ದೇವಸ್ಥಾನ ಅರ್ಚಕರು ಮಾತನಾಡಿ, ದೇವರ ದರ್ಶನಕ್ಕೆ ಬರುವ ಸಮಸ್ತ ಭಕ್ತಾದಿಗಳಿಗೆ ನಿಯಮಾನುಸಾರ ಕೋವಿಡ್ ನಿಯಮ ಪಾಲಿಸಬೇಕೆಂದು ದೇವಸ್ಥಾನಕ್ಕೆ ತಿಳಿಸಿದ್ದಾರೆ ಎಂದರು.
ವರದಿ: ಮಂಜು ಗುರುಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700



