ಸರಗೂರು: ತಾಲ್ಲೂಕಿನ ಪಟ್ಟಣದ 9 ವಾರ್ಡಿನ ವ್ಯಾಪ್ತಿಯ ಮಹಾವೀರ ಸರ್ಕಲ್ ಬಳಿ ಇರುವ ವಿನಾಯಕ ಮೆಡಿಕಲ್ ಸ್ಟೋರ್ ನಲ್ಲಿ ಶನಿವಾರ ರಾತ್ರಿ ನಡೆದ ಕಳ್ಳತನ ಪ್ರಕರಣವನ್ನು ಸರಗೂರು ಠಾಣೆಯ ಪೋಲೀಸರು 24 ಗಂಟೆಯಲ್ಲಿ ಭೇದಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್.ಎಸ್ ಮಹೇಶ್ ಬಂಧಿತ ಆರೋಪಿಯಾಗಿದ್ದು, ಮೆಡಿಕಲ್ ಸ್ಟೋರ್ ಗೆ ನುಗ್ಗಿ ಗಲ್ಲದಲ್ಲಿದ್ದ ಎರಡು ಸಾವಿರ ರೂ ಹಾಗೂ 8 ಸಾವಿರ ರೂ ಚಿಲ್ಲರೆ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದನು.
ಈ ಸಂಬಂಧ ಪಟ್ಟ ಮಾಲಿಕ ಯಾದವ್ ಅವರು ಭಾನುವಾರ ಸಂಜೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್ ಇವರ ನಿರ್ದೇಶನದಂತೆ ಉಪನಿರೀಕ್ಷಕರು ಮಧು ಅವರು ತಂಡವನ್ನು ರಚಿಸಿ ಸೋಮವಾರ ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳು ಜಗದೀಶ್, ಕೃಷ್ಣಯ್ಯ, ಹಾಗೂ ಇಮ್ರಾನ್, ಚಂದ್ರ ಇದ್ದರು .
ವರದಿ: ಹಾದನೂರು ಚಂದ್ರ