ಸ್ಕ್ಯಾಪ್ ಆದ ಬಿಎಂಟಿಸಿ ಬಸ್ ಕ್ಯಾಂಟೀನ್ ಆಗಿ ಪರಿವರ್ತನೆಯಾಗಿದೆ. 1064298 ಕಿ.ಮೀ. ಓಡಾಟ ನಡೆಸಿದ್ದ ಬಿಎಂಟಿಸಿ ಲೇಲ್ಯಾಂಡ್ ಉಗ್ರಾಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಸಿ ನೌಕರರ ಅನುಕೂಲಕ್ಕಾಗಿ ಬಸ್ ಕ್ಯಾಂಟೀನ್ ವ್ಯವಸ್ಥೆ ಮಾಡಿದ್ದು, ಊಟದ ಹಾಲ್ ನಿರ್ಮಿಸಿ, ಕ್ಯಾಂಟೀನ್ ಇಲ್ಲದಂತಹ ಘಟಕ, ಬಸ್ ನಿಲ್ದಾಣಗಳಲ್ಲಿ ತಿಂಡಿ, ಊಟ ಮಾಡಲು ಈ ಬಸ್ ಉಪಯೋಗವಾಗಿದೆ. ಭೋಜನ ಬಂಡಿ ಹೆಸರಿನಲ್ಲಿ ಕ್ಯಾಂಟೀನ್ ಬಸ್ ನಿರ್ಮಾಣ ಮಾಡಲಾಗಿದೆ.
ಪೀಣ್ಯ ಮತ್ತು ಯಶವಂತಪುರ ಬಸ್ ಡಿಪೋಗಳಲ್ಲಿ ಈ ಬಸ್ ಕ್ಯಾಂಟೀನ್ ಸದ್ಯ ಚಾಲ್ತಿಯಲ್ಲಿ ಎನ್ನಲಾಗುತ್ತಿದೆ. ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಎಂಟಿಸಿ ನೌಕರರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಮಾಡುವುದಕ್ಕೆ ಈ ಕ್ಯಾಂಟೀನ್ ಸಹಕಾರಿಯಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


