ಹೊಸ ಶೈಕ್ಷಣಿಕ ವರ್ಷದಿಂದ ಪ್ರಥಮ ದರ್ಜೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ಏರಿಸುವಂತೆ ಕೇಂದ್ರವು ರಾಜ್ಯಗಳಿಗೆ ಪತ್ರ ಕಳುಹಿಸಿದೆ. ಪತ್ರದಲ್ಲಿ ಕರ್ನಾಟಕ ಸೇರಿದಂತೆ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಪ್ರವೇಶ ಮಾರ್ಗಸೂಚಿಗಳನ್ನು ಮಾರ್ಪಾಡು ಮಾಡಿ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಹಲವು ರಾಜ್ಯಗಳು ಹಿಂದಿನ ವರ್ಷಗಳಲ್ಲಿ ನೀಡಿದ ಸೂಚನೆಗಳನ್ನು ಜಾರಿಗೊಳಿಸದ ಪರಿಸ್ಥಿತಿಯಲ್ಲಿ ಹೊಸ ಪತ್ರ ಬಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ(2020) ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ವಯಸ್ಸಾಗಿರಬೇಕು ಎಂದು ಸೂಚಿಸಿದೆ. 14 ರಾಜ್ಯಗಳು/UTಗಳು ವಯಸ್ಸಿನ ಮಿತಿಯನ್ನು 6 ಕ್ಕೆ ಹೆಚ್ಚಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 3–6 ವರ್ಷಗಳು ನರ್ಸರಿ ಮತ್ತು ಎಲ್.ಕೆ.ಜಿ., ಯು.ಕೆ.ಜಿ ಇರಲಿ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


