ಕೆಲವು ಸೆಲೆಬ್ರಿಟಿಗಳು ಇತ್ತೀಚೆಗೆ ಡಾರ್ಕ್ ವೆಬ್ ಎಂಬ ತಂತ್ರಾಂಶ ಬಳಸಿ ವಾಟ್ಸಪ್ ನಂತಹ ಸಂವಹನ ಅಪ್ಲಿಕೇಶನ್ ಗಳನ್ನು ಹ್ಯಾಕ್ ಮಾಡುತ್ತಾರೆ’ ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅವರು, ಚಿತ್ರರಂಗದ ವ್ಯಕ್ತಿಗಳ ಮೇಲೆ ಈ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ನೆಟ್ಟಿಗರು ಇದ್ದರೂ ಇರಬಹುದೆಂದು ಎಂದಿದ್ದಾರೆ.
ನೆಟ್ಟಿಗರೊಬ್ಬರ ಪ್ರಶ್ನೆಯುಳ್ಳ ಪೋಸ್ಟ್ ಅನ್ನು ಮರು ಟ್ಯಾಗ್ ಮಾಡಿಕೊಂಡಿರುವ ನಟಿ ಕಂಗನಾ, “ಅದ್ಭುತ!! ಡಾರ್ಕ್ ವೆಬ್ ಬಗ್ಗೆ ಕೇಂದ್ರವು ಏನಾದರೂ ಮಾಡಬೇಕು. ಕೆಲವು ಪ್ರಭಾವಿ ವ್ಯಕ್ತಿಗಳು ಡಾರ್ಕ್ ವೆಬ್ ಮೂಲಕ ವಾಟ್ಸಪ್ ಮತ್ತು ಇಮೇಲ್ ಗಳಂತಹ ಪ್ಲಾಟ್ ಫಾರ್ಮ್‌ಗಳನ್ನು ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೇಂದ್ರವು ಡಾರ್ಕ್ ವೆಬ್ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು. ಅನೇಕ ಜನಪ್ರಿಯ ಚಿತ್ರರಂಗದ ವ್ಯಕ್ತಿಗಳು ಇದಕ್ಕೆ ವ್ಯಸನಿಯಾಗಿದ್ದಾರೆ. ಅವರು ಅಲ್ಲಿಂದ ಕಾನೂನುಬಾಹಿರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬರ ವಾಟ್ಸಪ್ ಮತ್ತು ಇ-ಮೇಲ್‌ನಂತಹ ಸಂವಹನಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಭೇದಿಸಿದರೆ ಅನೇಕ ದೊಡ್ಡ ಹೆಸರುಗಳು ಬಹಿರಂಗಗೊಳ್ಳುತ್ತವೆ. ತಪ್ಪಿತಸ್ಥರು ಅಂತ ಕಂಡುಬಂದರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಕೇಂದ್ರ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದಿದ್ದಾರೆ.
ನಟಿಯ ಈ ಪೋಸ್ಟ್ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಯಾರ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ನಿಖರವಾಗಿ ಹೇಳಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


