ಕೋಲಾರ: ಕುಮಾರಸ್ವಾಮಿ ಸದಾ ಡಬ್ಬದಲ್ಲಿ ರೀಲು ಇದೆ ಎಂದು ಸುಳ್ಳು ಹೇಳುತ್ತಾರೆ. ಆ ರೀಲು ಹೊರಬಿಡುವುದೇ ಇಲ್ಲ ಎಂದು ಡಿಕೆ ಸೋದರರು ಮಾಡಿರುವ ಟೀಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ದೊಡ್ಡಾಲಳ್ಳಿ, ಕೋಡಳ್ಳಿ ಮುಂತಾದೆಡೆ ಡಿ.ಕೆ. ಶಿವಕುಮಾರ್ ಟೆಂಟ್ ಗಳಲ್ಲಿ ತೋರಿಸಿದ ರೀಲನ್ನು ನಾವು ಯಾವತ್ತೂ ತೋರಿಸಿಲ್ಲ ಎಂದು ಪರೋಕ್ಷವಾಗಿ ಬ್ಲೂಫಿಲಂ ದಂಧೆಯ ಆರೋಪವನ್ನು ಕೆದಕಿದ್ದಾರೆ.
ತಮ್ಮ ಏಕವಚನದಲ್ಲಿ ಡಿ.ಕೆ. ಶಿವಕುಮಾರ್ ಹರಿಹಾಯ್ದಿರುವ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ಡಿಕೆಶಿ ಈಗ ಸಂಪೂರ್ಣವಾಗಿ ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಅವರ ಶಾಸಕರಿಗೆ ಬೆದರಿಕೆ ಹಾಕಲಾಗಿದೆ, ಆಮಿಷ ಒಡ್ಡಲಾಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ. ಅವರ ಹಣಬಲ , ತೋಳ್ಬಲ ಮತ್ತು ಅಡ್ಜಸ್ಟ್ ಮೆಂಟ್ ರಾಜಕಾರಣದ ವಿರುದ್ದ ಜೆಡಿಎಸ್ ಎಲ್ಲಾದರೂ ಸೆಣಸಲು ಸಾಧ್ಯವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಯಾವುದೇ ಶಾಸಕರೂ ಇದುವರೆಗೂ ನನ್ನ ವಿರುದ್ದ ಬೆದರಿಕೆ ಆರೋಪ ಮಾಡಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


