ಇತ್ತೀಚೆಗಷ್ಟೇ ಚಿತ್ರದ ಒಂದು ಹಾಡಿನ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಉಪ್ಪಿಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ಲಭಿಸಿತ್ತು. ಮಾತ್ರವಲ್ಲ ಹಲವಾರು ಮಂದಿ ಉಪ್ಪಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ. ಈ ಕುರಿತಂತೆ ಅಭಿಮಾನಿಗಳಲ್ಲಿಯೂ ಸಹ ಸಾಕಷ್ಟು ಗೊಂದಲ ಹುಟ್ಟಿಕೊಂಡಿತ್ತು. ಇದೇ ಬಗೆಹರಿದಿಲ್ಲ ಆಗಲೇ ಮತ್ತೊಂದು ಅನಿವಾರ್ಯ ಕಾರಣ ಹೊರಬಿದ್ದಿದೆ.
ಅಸಲಿಗೆ ಏನಿದು ಅನಿವಾರ್ಯ ಕಾರಣಗಳಿಂದ ಎಂಬುದು ಸದ್ಯ ಎಲ್ಲರ ಪ್ರಶ್ನೆಯಾಗಿದೆ. ಸದಾ ಡಿಫರೆಂಟ್ ಆಗಿ ತೋರಿಸುವುದು,ಚಿತ್ರರಸಿಕರ ತಲೆಗೆ ಹುಳಬಿಡುವುದು ಉಪೇಂದ್ರ ಅವರ ರಿಯಲ್ ಸ್ಟೈಲ್. ಇನ್ನೊಂದು ವಿಚಾರವೆಂದ್ರೆ ಕರಿಮಣಿ ಮಾಲೀಕ ನೀನಲ್ಲ ಎನ್ನುವ ೨೫ ವರ್ಷಗಳ ಹಿಂದಿನ ಹಾಡೊಂದು ಇತ್ತೀಚೆಗೆ ವೈರಲ್ ಆಗಿರುವ ಬಗೆಗಿನ ವಿಚಾರ ನಿಮ್ಗೆ ಗೊತ್ತೆ ಇದೆ. ಒಂದೇ ಪದದಲ್ಲಿ ಎರಡೆರಡು ಅರ್ಥವನ್ನ ಹೇಳುವ ಹಾಡೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಅದೇ ರೀತಿಯಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಾ ಹಾಗೂ ವಿಭಿನ್ನವಾಗಿರುವ ‘ಚೀಪ್ ಚೀಪ್’ ಲಿರಿಕಲ್ ವೀಡಿಯೋ ಕೂಡ ಸದ್ಯದಲ್ಲೇ ಹೊರಬೀಳಲಿದೆ. ಈ ಬಗ್ಗೆ ಉಪ್ಪಿ ಹೇಳುತ್ತಾ ಶೀಘ್ರವೇ ನಿಮ್ಮ ಮುಂದೆ ಚೀಪ್ ಚೀಪ್ ಹಾಡು ಬರಲಿದೆ ಎಂದು ನಟ ಸ್ಪಷ್ಟಪಡಿಸಿದ್ದಾರೆ. ಅದರ ದಿನಾಂಕ ಮತ್ತು ವೇಳೆಯನ್ನು ಕೂಡ ಅಧಿಕೃತವಾಗಿ ಪೋಸ್ಟರ್ ಮುಖೇನ ತಿಳಿಸಿದ್ದಾರೆ.
“ಚೀಪ್ ಚೀಪ್” ಏನದು? ದೊಡ್ಡದು…ಚಿಕ್ಕದು…ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ. ಅದಾಗಿಹೋಗುತ್ತದೆ ಎಂದರೆ ಏನು? “ಅದು” ಏನಾಗುತ್ತದೆ? ಎಂದು ಮಾರ್ಚ್ 4ನೇ ತಾರೀಕು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ ಎಂದು ಪೋಸ್ಟರ್ ಹಾಗೂ ಕಿರು ವಿಡಿಯೋ ಮೂಲಕ ನಟ ಅಪ್ಡೇಟ್ ಕೊಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


