ಬೆಂಗಳೂರು: ಗೃಹ ಜ್ಯೋತಿ ಯೋಜನೆ ಜೊತೆಗೆ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು ಸರ್ಕಾರ ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಹೊರಡಿಸಿದೆ.
ಸರಾಸರಿ 100 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಬಳಕೆದಾರರಿಗೆ ಯುನಿಟ್ ಮೇಲೆ 1 ರೂಪಾಯಿ 10 ಪೈಸ್ ಇಳಿಕೆ ಮಾಡಿದ್ದು ವಾಣಿಜ್ಯ ಬಳಕೆದಾರರಿಗೂ ಕೂಡ ಪ್ರತಿ ಯುನಿಟ್‌ಗೆ 1 ರೂಪಾಯಿ 25 ಪೈಸೆ ಇಳಿಕೆ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದೆ.
ಹೊಸ ದರ ಮಾರ್ಚ್ 1 ರಿಂದ ಅನ್ವಯವಾಗಲಿದೆ. ಹೆಚ್ ಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್‌ಗೆ 40 ಪೈಸೆ ಇಳಿಕೆ ಮಾಡಲಾಗಿದೆ. ಬೇಡಿಕೆಯ ಶುಲ್ಕಗಳು ಪ್ರತಿ ರೂ.10 ರಷ್ಟು ಕಡಿಮೆಯಾಗಿದೆ. ಹೆಚ್ಟಿ ಖಾಸಗಿ ಏತ ನೀರಾವರಗೆ ಪ್ರತಿ ಯೂನಿಟ್ ಗೆ 200 ಪೈಸೆ ಕಡಿಮೆಯಾಗಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್ ದರ ವಿಚಾರದಲ್ಲಿ ಕೊಂಚ ರಿಲೀಫ್ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


