ಸರಗೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸಲು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಮುಂಬರುವ ಲೋಕಸಭಾ ಚುನಾವಣೆಗೆ ಕೈ ಜೋಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ನಾಗರಾಜು ಕರೆ ನೀಡಿದರು.
ತಾಲ್ಲೂಕಿನ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಶುಕ್ರವಾರ ರಂದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ಚಾಮರಾಜನಗರ ಮೀಸಲು (ಎಸ್ಸಿ) ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಿದರೂ, ಅವರ ಪರವಾಗಿ ಕೆಲಸ ಮಾಡುತ್ತವೆ ಎಂದರು.
ಮಾಜಿ ಲೋಕಸಭಾ ಸಂಸದರಾದ ದಿವಂಗತ ಆರ್. ಧ್ರುವನಾರಾಯಣ್ ಎರಡು ಬಾರಿ ಸಂಸದರಾಗಿ ಸಂದರ್ಭದಲ್ಲಿ ಹೆಚ್.ಡಿ. ಕೋಟೆ ಮತ್ತು ಸರಗೂರು ಬಗ್ಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದಾರೆ. ಅದಕ್ಕೆ ಶಾಸಕ ಅನಿಲ್ ಚಿಕ್ಕಮಾದು ರವರನ್ನು 2018 ಸಾಲಿನ ಚುನಾವಣೆಯಲ್ಲಿ ಗೆಲ್ಲಿಸಿ. ನಂತರ ಎರಡನೇ ಬಾರಿ ಚುನಾವಣೆ ಬಂದಾಗ ಸಂದರ್ಭದಲ್ಲಿ ಹೆಚ್.ಡಿ.ಕೋಟೆ ತಾಲೂಕು ಇತಿಹಾಸದಲ್ಲೇ ಎರಡನೇ ಬಾರಿ ಯಾರು ಗೆದ್ದಿಲ್ಲ ಎಂದು ಹಣೆಪಟ್ಟಿ ಕಟ್ಟಿಕೊಂಡಿತ್ತು. ಮಾಜಿ ಶಾಸಕ ಎಸ್. ಚಿಕ್ಕಮಾದು ಹಾಗೂ ಧ್ರುವನಾರಾಯಣ್ ಅವರು ಕೆಲಸ ಹಾಗೂ ಪ್ರೀತಿ ವಿಶ್ವಾಸದಿಂದ ತಾಲ್ಲೂಕಿನ ಜನತೆ ಎರಡನೇ ಬಾರಿಗೆ ಬಹುಮತಗಳಿಂದ ಅನಿಲ್ ಚಿಕ್ಕಮಾದು ರವರನ್ನು ಗೆಲ್ಲಿಸಿಕೊಟ್ಟರು. ಅನೀಲ್ ಚಿಕ್ಕಮಾದುವರಿಗೆ ಧ್ರುವನಾರಾಯಣ್ ರವರು ಏನು ದಾರಿಯನ್ನು ತೋರಿಸಿಕೊಟ್ಟರು, ಅದೇ ದಾರಿಯಲ್ಲಿ ಹೋಗಿ ಸಾರ್ವಜನಿಕರಿಂದ ಪ್ರೀತಿ ವಿಶ್ವಾಸ ಪಡೆದುಕೊಂಡು ಹಾಗೂ ಎಲ್ಲಾ ಸಮುದಾಯದ ಗಳಿಗೆ ಭವನಗಳು ಮತ್ತು ಸಣ್ಣ ಪುಟ್ಟ ಸಹಾಯ ಮಾಡಿಕೊಂಡು ಬಂದಿದ್ದಾರೆ. ಅಂತವರ ತಾಲ್ಲೂಕಿನ ಜನತೆ ಅವರ ಕೈ ಬಲಪಡಿಸಿ ದ್ದಾರೆ ಎಂದು ತಿಳಿಸಿದರು.
ಅದೇ ರೀತಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಧಿಕಾರ ಬರಕ್ಕೂ ಮುಂಚೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು. ಅಧಿಕಾರ ಬಂದ ಮೇಲೆ ನಮ್ಮ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿ ವಕುಮಾರ್ ಅವರ ನೇತೃತ್ವದಲ್ಲಿ ಜಾರಿಗೆ ತಂದು, ರಾಜ್ಯದ ರೈತರಿಗೆ ಕೂಲಿಕಾರರಿಗೆ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದೆ. ಅದಕ್ಕೆ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಇನ್ನೂ ಹೆಚ್ಚಿನ ಅನುದಾನ ಮತ್ತು ಇತರೆ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಬಾರಿ ಲೋಕಸಭಾ ಚುನಾವಣೆಗೆ ಯಾರೇ ಅಭ್ಯರ್ಥಿಗಳಾಗಲಿ, ಅವರಿಗೆ ನಮ್ಮ ತಾಲ್ಲೂಕಿನ ಜನತೆ ಪರವಾಗಿ ಕೈ ಜೋಡಿಸುತ್ತೇವೆ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲಿ ಕೆಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದರೆ, ನೂರಕ್ಕೂ ನೂರು ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬರುತ್ತದೆ ಎಂದು ಜನತೆ ಪರವಾಗಿ ಮನವಿ ಮಾಡಿಕೊಂಡರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


