ಹೆಚ್.ಡಿ.ಕೋಟೆ: ಸಾಗುವಳಿ ಚೀಟಿ ನೀಡಲು 20,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಕಂದಾಯ ಇಲಾಖೆ ಸಿಬ್ಬಂದಿ ಗ್ರಾಮಸಹಾಯಕ ಕೃಷ್ಣ ಎಂಬಾತ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಹುಣಸೂರಿನ ನಿವಾಸಿ ಮರಿಸ್ವಾಮಿ ಎಂಬ ವ್ಯಕ್ತಿಗೆ ಸಾಗುವಳಿ ಚೀಟಿ ನೀಡಲು 20 ಸಾವಿರ ರೂಪಾಯಿಗೆ ಗ್ರಾಮಸಹಾಯಕ ಕೃಷ್ಣ ಬೇಡಿಕೆ ಇಟ್ಟಿದ್ದಾನೆ. ಅಂತೆಯೇ ಮರಿಸ್ವಾಮಿ ಮುಂಗಡವಾಗಿ 15,000 ಹಣವನ್ನು ನೀಡಿದರು. ಉಳಿದ 5 ಸಾವಿರ ರೂಪಾಯಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದು, ಲಂಚಬಾಕ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಜಿತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಕೃಷ್ಣಯ್ಯ ವಿ, ಲೋಕಾಯುಕ್ತ ಪೊಲೀಸ್ ಉಪನಿರೀಕ್ಷಕರಾದ ರೂಪಶ್ರೀ, ಜಯರತ್ನ, ಉಮೇಶ್ ಮತ್ತು ಸಿಬ್ಬಂದಿಗಳಾದ ಗುರುಪ್ರಸಾದ್, ಗೋಪಿ, ನೇತ್ರಾವತಿ, ತ್ರಿವೇಣಿ, ಕಾಂತರಾಜು, ಪ್ರಕಾಶ್, ಮೋಹನ್ ಗೌಡ, ಶೇಖರ್, ಮೋಹನ್, ಲೋಕೇಶ್, ಪಾಲ್ಗೊಂಡಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


