ದೆಹಲಿಯ ನರೇಲಾ ಪ್ರದೇಶದ ಶಾಲೆಯ ಆವರಣದಲ್ಲಿ 28 ವರ್ಷದ ಬಿಜೆಪಿ ಕಾರ್ಯಕರ್ತೆಯೋರ್ವರ ಮೃತದೇಹ ಪತ್ತೆಯಾಗಿದೆ. ಸಂತ್ರಸ್ತೆಯನ್ನು ವರ್ಷಾ ಪವಾರ್ ಎಂದು ಗುರುತಿಸಲಾಗಿದೆ.
ಹೌದು, ಫೆಬ್ರವರಿ 24ರಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತೆ ವರ್ಷಾ ಅವರು ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದು ಪೊಲೀಸರು ತನಿಖೆ ಶುರುಮಾಡಿದ್ದರು. ಆದರೀಗ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು ವರ್ಷಾಳ ಸಾವಿಗೆ ಶಾಲೆಯ ಓನರ್ ಒಬ್ಬ ಪ್ರಮುಖ ಕಾರಣನಾಗಿದ್ದಾನೆ. ವಿಚಿತ್ರ ಎಂದರೆ ಓನರ್ ಸೋಹನ್ ಲಾಲ್ ಕೂಡ ಸೋನಿಪತ್ ನಲ್ಲಿ ರೈಲಿನ ಮುಂದೆ ಜಿಗಿದು ಸಾವಿಗೆ ಶರಣಾಗಿದ್ದಾನೆ.
ಅಂದಹಾಗೆ ಮೂಲಗಳ ಪ್ರಕಾರ ಮೃತ ವರ್ಷಾ, ನರೇಲಾದ ಸ್ವತಂತ್ರ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಆ ಶಾಲೆಗೆಆಕೆಯು ಸಹ ಓನರ್ ಆಗಿದ್ದಳು. ಆಕೆಯ ಬಿಸಿನೆಸ್ ಪಾಲುದಾರ ಸೋಹನ್ ಲಾಲ್, ವರ್ಷಾಳ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಇನ್ನು ಸೋಹನ್ ಲಾಲ್ ಮತ್ತು ವರ್ಷಾ ನಡುವಿನ ಸಂಬಂಧದಲ್ಲಿದ್ದ ಕಲಹವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ವರ್ಷಾ ಕೆಲಸ ಮಾಡುತ್ತಿದ್ದ ಶಾಲೆಯ ಆವರಣದಲ್ಲಿರುವ ಸ್ಟೇಷನರಿ ಶಾಪ್ ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ಅನುಮಾನಗೊಂಡ ವರ್ಷಾಳ ತಂದೆ ಬುಧವಾರ ಮಧ್ಯಾಹ್ನ ಬಲವಂತವಾಗಿ ಓಪನ್ ಮಾಡಿಸಿದಾಗ ಆಕೆಯ ಮೃತದೇಹ ಒಳಗಡೆ ಪತ್ತೆಯಾಗಿದೆ. ಆಕೆಯ ಕುತ್ತಿಗೆಯಲ್ಲಿ ಗಾಯದ ಕಲೆ ಇದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


