ತಿಪಟೂರು: ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲಾಗುವುದಿಲ್ಲ ಕೆಲವೊಂದು ಕಾರ್ಯಗಳಿಗೆ ಜನರು ಕೈಜೋಡಿಸಬೇಕು. ಆಗ ಮಾತ್ರ ಬಡವರಿಗೆ ಅನುಕೂಲವಾಗಲಿದೆ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.
ಡಾ. ಶ್ರೀಧರ್ ಅನ್ನದಾಸೋಹದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ತಿಪಟೂರಿನಲ್ಲಿ ಮಿನಿ ವಿಧಾನಸೌಧ ಸಾರ್ವಜನಿಕ ಆಸ್ಪತ್ರೆ ಎಲ್ಲಾ ಕಚೇರಿಗಳ ಜಾಗ ಹತ್ತಿರವಿದ್ದು, ದೂರದ ಹಳ್ಳಿಗಳಿಂದ ಆಗಮಿಸುವ ರೈತ ಕಾರ್ಮಿಕರು ಮಧ್ಯಾಹ್ನದ ಅನ್ನದಾಸೋಹದಿಂದ ಅನುಕೂಲವಾಗುತ್ತದೆ. ಇಂತ ಪುಣ್ಯ ಕಾರ್ಯದಲ್ಲಿ ರಾಜಕಾರಣಿಗಳನ್ನು ಸೇರಿಸಿಕೊಳ್ಳಬೇಡಿ, ರಾಜಕಾರಣಿಗಳು ಮುಂದೆ ಬಂದರೆ ಇಂಥ ಒಳ್ಳೆಯ ಕೆಲಸಗಳನ್ನು ಕೆಡಿಸಿಬಿಡುತ್ತಾರೆ ಎಂದು ಹೇಳಿದರು.
ಕಲ್ಲೇಶ್ವರ ದೇವಸ್ಥಾನದ ಅವನದಲ್ಲಿ ಮುಜರಾಯಿ ಇಲಾಖೆ ಸೇರಿದ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲು ಸಚಿವ ಹೆಚ್.ಕೆ.ಪಾಟೀಲ್ ಅವರಿಂದ 50 ಲಕ್ಷ ಹಣ ಬಿಡುಗಡೆ ಮಾಡಿಸಿದ್ದೇನೆ, ಉಳಿದ ಹಣವನ್ನು ಕೆಲಸ ಪ್ರಾರಂಭವಾದ ಮೇಲೆ ನೀಡುವುದಾಗಿ ಹೇಳಿದ್ದಾರೆ. ಈ ಜಾಗದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ನೀಡಿದ ಜಾಗವನ್ನು ಅಧಿಕಾರಿಗಳಿಗೆ ಬಿಟ್ಟುಕೊಡಲು ಸೂಚಿಸಿದ್ದೇನೆ. ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇ.ಒ.ಸುದರ್ಶನ್, ತಹಶೀಲ್ದಾರ್ ಪವನ್ ಕುಮಾರ್, ನಗರಸಭೆ ಕಮಿಷನರ್ ವಿಶ್ವೇಶ್ವರ ಭದ್ರಗದ್ದೆ, ಯುವ ಮುಖಂಡ ನಿಖಿಲ್ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್, ಕಾರ್ಯದರ್ಶಿ ತಿಪಟೂರು ಕೃಷ್ಣ, ಉಪಾಧ್ಯಕ್ಷ ಕೆ.ಎಂ.ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


