ಸಾವರ್ಕರ್ ಬೋರ್ಡ್ ಸಮೇತ ಧ್ವಜ ಕಟ್ಟೆ ತೆರವು ಮಾಡಲಾಗಿತ್ತು. ಇದೀಗ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿದ್ದಾರೆ.
ಹನುಮ ಧ್ವಜ ತೆರವು ಮಾಡಿದ್ದ ಸ್ಥಳದಲ್ಲೇ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹನುಮ ಧ್ವಜವನ್ನು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ನಡೆದಿದೆ. ಆ ಮೂಲಕ ಸಂಸದರು ಮತ್ತೆ ಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ.
ಅನಧಿಕೃತವಾಗಿ ಧ್ವಜ ಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ಸಾವರ್ಕರ್ ಬೋರ್ಡ್ ಅನ್ನು ತೆರವು ಮಾಡಲಾಗಿತ್ತು. ಇದಕ್ಕೆ ಸ್ಥಳಿಯ ಹಿಂದೂ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
(ಮಾರ್ಚ್ 4) ಕಾರ್ಯಕರ್ತರ ಸಭೆಗೆಂದು ಅನಂತ್ ಕುಮಾರ್ ಹೆಗಡೆ ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನಾನಿದ್ದೇನೆ ನಡೀರಿ ಎಂದು ಹೇಳಿ ಅನಂತ್ ಕುಮಾರ್ ಹೆಗಡೆ ತೆರವು ಮಾಡಲಾಗಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದ್ದಾರೆ ಮಾತ್ರವಲ್ಲದೆ, ಸಾವರ್ಕರ್ ಬೋರ್ಡ್ ಕೂಡ ಹಾಕಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


