ಬೆಂಗಳೂರು: ಲೋಕಸಭಾ ಚುನಾವಣೆಗೆ 2 ಸುತ್ತಿನಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡುವ ಕುರಿತು ಪ್ರತಿಕ್ರಿಯೆ ನೀಡಿದರು. ರಾಜಕಾರಣದಲ್ಲಿ ಎಲ್ಲವೂ ಸಾಧ್ಯತೆಯಿದೆ. ಆದರೆ ಈಗಲೇ ಹೆಸರನ್ನು ಬಹಿರಂಗಪಡಿಸಲ್ಲ. 2 ಸುತ್ತಿನಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ವ್ಯಕ್ತಿ ಮೇಲೆ ನಡೆಯಲ್ಲ. ವ್ಯಕ್ತಿಗಿಂತ ಹೆಚ್ಚು ಪಕ್ಷ, ಯೋಜನೆ, ಗ್ಯಾರಂಟಿಯ ಮೇಲೆ ನಡೆಯುತ್ತದೆ. ಅವರದ್ದೇ ಆದಂತಹ ಲೆಕ್ಕಾಚಾರ ಅವರೂ ಇಟ್ಕೊಂಡಿದ್ದಾರೆ. ನಮ್ಮದೇ ಆದಂತಹ ಲೆಕ್ಕಾಚಾರ ನಾವು ಇಟ್ಕೊಂಡಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯ ಕುರಿತು 6 ಗಂಟೆಗೆ ರಾಜ್ಯದ ಶಾಸಕ ಸಚಿವರೊಂದಿಗೆ ಹೈಕಮಾಂಡ್ ಸಭೆ ಇದೆ. ಹಾಗಾಗಿ ಎಲ್ಲರೂ ಬಂದಿದ್ದೇವೆ. ಶೇ. 50ರಷ್ಟು ಮುಗಿಯುತ್ತದೆ. ನಮ್ಮ ಚರ್ಚೆ ಮುಗಿಯುತ್ತದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


