ಮುಸ್ಲಿಂ ಯುವತಿಯೋರ್ವಳು ಹಿಜಾಬ್ ಧರಿಸಿದ ಕಾಲೇಜಿಗೆ ಬಂದಿದ್ದಕ್ಕೆ ವಿದ್ಯಾರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿದ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಹಾಸನದ ಖಾಸಗಿ ಕಾಲೇಜಿನಲ್ಲಿ.
ವಿದ್ಯಾಸೌಧ ಕಾಲೇಜಿನ ಪ್ರಾಂಶುಪಾಲ ರಂಗೇಗೌಡ ಅವರು ಹೇಳಿರುವ ಪ್ರಕಾರ, ಈ ಘಟನೆ ನಡೆದಿರುವುದು ಎರಡು ದಿನಗಳ ಹಿಂದೆ. ಅಧಿಕಾರಿಗಳು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಭೆ ನಡೆಸಿದ್ದು, ಅವರು ಮತ್ತೆ ಹಿಜಾಬ್ ಧರಿಸದಿರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಅದು ಹಿಜಾಬ್ ಆಗಿರಲಿಲ್ಲ. ಹಿಜಾಬ್ ಅನ್ನು ಹೋಲುವ ಬಟ್ಟೆಯನ್ನು ಧರಿಸಲಾಗಿತ್ತು. ಅದನ್ನು ಧರಿಸಿದ ವಿದ್ಯಾರ್ಥಿನಿ ತನಗೆ ಕಿವಿ ಸಮಸ್ಯೆ ಇದೆ ಮತ್ತು ಅದ್ದರಿಂದ ಕಿವಿಯನ್ನು ಮುಚ್ಚಿಕೊಂಡಿರುವುದಾಗಿ ಹೇಳಿದ್ದಳು. ನಾವು ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ಸಭೆ ನಡೆಸಿದ್ದಾಗಿ ಮತ್ತು ಅದನ್ನು ಪುನರಾವರ್ತನೆ ಮಾಡುವುದಿಲ್ಲ ಎಂದು ಹೇಳಿರುವುದಾಗಿ ಪ್ರಾಂಶುಪಾಲರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


