ಇತ್ತೀಚೆಗೆ ಹೆತ್ತ ತಾಯಿಯಿಂದಲೇ ಮಕ್ಕಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ.
ಇದೀಗ ಬೆಂಗಳೂರು ನಗರದಲ್ಲಿ ಮತ್ತೊಬ್ಬ ಮಹಿಳೆಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದ ಅಮಾನವೀಯ ಘಟನೆ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ ಮೂರು ವರ್ಷದ ಮಗುವಿಗೆ ತಾಯಿ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ.
ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದು, ಅವರ ದಾಂಪತ್ಯದಲ್ಲಿ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಬಳಿಕ ಪತಿಯಿಂದ ವಿಚ್ಛೇದನ ಪಡೆದುಕೊಂಡ ಆಯೇಷಾ ತವರಿಗೆ ಹೋಗಿ ನೆಲೆಸಿದ್ದಳು.
ಆಯೇಷಾಗೆ ಸಲೀಂ ಎಂಬ ಪ್ರಿಯಕರ ಇದ್ದು, ಅದರಂತೆ, ಪತಿ ಇಮ್ರಾನ್ ಖಾನ್ ಮೇಲಿನ ಕೋಪಕ್ಕೆ ಆಯೇಷಾ ತನ್ನ ಪ್ರಿಯಕರ ಸಲೀಂ ಜೊತೆ ಸೇರಿಕೊಂಡು, ಮಗುವಿಗೆ ಹಲ್ಲೆ ನಡೆಸಿದ್ದಾಳೆ.
ಮಗುವನ್ನು ಕಚ್ಚಿ, ಮಗುವಿಗೆ ಫ್ರಿಡ್ಜ್ ನೀರು ಸರಿದು ಚಿತ್ರಹಿಂಸೆ ನೀಡಲಾಗಿದೆ. ಅಲ್ಲದೆ, ಮಗಳ ಕೈಗೆ ಸಿಗರೇಟ್ ನಿಂದ ಸುಡಲಾಗಿದೆ. ಬಳಿಕ ಈ ಮಗುವಿನ ಮೇಲೆ ಸಲೀಂ ಹಲ್ಲೆ ನಡೆಸಿದ್ದಾನೆ. ಕೆಆರ್ ಎಸ್ ಬಳಿಯ ಲಾಡ್ಜ್ ನಲ್ಲಿ ಹೋಗಿ ಮಗಳನ್ನು ನೆಲಕ್ಕೆ ಬಿಸಾಡಿರುವ ಆರೋಪವೂ ಕೇಳಿಬಂದಿದೆ.
ಚಿತ್ರಹಿಂಸೆಯ ಬಳಿಕ ಘಟನೆಯನ್ನು ತಂದೆಗೆ ಹೇಳಿದರೆ ತಂದೆಯ ಜೊತೆ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಇದರಿಂದ ಭಯಗೊಂಡ ಮಗು ತಂದೆಯ ಜೊತೆ ಘಟನೆಯನ್ನು ಹೇಳಿಕೊಂಡಿರಲಿಲ್ಲ.
ಕೆಲ ದಿನಗಳ ನಂತರ ಘಟನೆ ಬಗ್ಗೆ ಬಾಯಿಬಿಟ್ಟಿದ್ದು, ಇಮ್ರಾನ್ ನೀಡಿದ ದೂರಿನ ಅನ್ವಯ ಅಯೇಷಾ, ಈಕೆಯ ಪ್ರಿಯಕರ ಸಲೀಂ ಮತ್ತು ಜಬೀರ್ ಎಂಬವರ ವಿರುದ್ಧ ಜೆಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


