ಬೆಂಗಳೂರು: ಪತ್ರಕರ್ತರ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲ ರಾಜ್ಯದಲ್ಲಿ ಪತ್ರಕರ್ತರು ಸುದ್ದಿ ಮಾಡುವ ಸಂದರ್ಭದಲ್ಲಿ ಎಷ್ಟು ಹಲ್ಲೆ ಮತ್ತು ಕೊಲೆಗಳಾಗಿರುವ ಉದಾಹರಣೆಗಳಿವೆ. ಆದ್ದರಿಂದ ಸರ್ಕಾರ ಕೂಡಲೇ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಕಾ.ನಿ.ಪ.ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ ಸರ್ಕಾರವನ್ನು ಒತ್ತಾಯಿಸಿದರು.
ಅವರು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಕಾ.ನಿ. ಪತ್ರಕರ್ತರ ದ್ವನಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಕಾ.ನಿ.ಪ.ದ್ವನಿ ಕೆಲವೇ ದಿನಗಳಲ್ಲಿ ಪತ್ರಕರ್ತರ ನಾನಾ ಬೇಡಿಕೆಗಳ ಮುಂದಿಟ್ಟು ಸಾವಿರಾರು ಪತ್ರಕರ್ತರ ಜೊತೆ ಹೋರಾಟ ಮಾಡಲಾಗಿದೆ. ಪತ್ರಕರ್ತರ ಜೀವ ರಕ್ಷಣಾ ಕಾಯ್ದೆ ಬಹು ಮುಖ್ಯವಾಗಿದೆ. ಹಲವು ಮೂಲಭೂತ ಸೌಕರ್ಯಗಳ ಬಗ್ಗೆ ಬೆಂಗಳೂರಿನ ಪ್ರೀಡಂ ಪಾರ್ಕ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರಾದ ಪ್ರಭಾಕರ್ ಅವರೇ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದ್ದರು. ಅದೇ ರೀತಿ ಬೆಳಗಾಂ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ಸಚಿವ ಕೆ.ಹೆಚ್.ಮುನಿಯಪ್ಪ ನಮ್ಮಮನವಿ ಸ್ವೀಕರಿಸಿದ್ದರು. ನಿಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪತ್ರ ಬಂದಿದೆ. ನಿಮ್ಮಿಂದಲೇ ಎಲ್ಲವೂ ಎಂದು ಹೇಳಿಕೊಂಡಿರುವ ನೀವು ಪತ್ರಕರ್ತರ ಪರವಾಗಿ ಒಂದೇ ಒಂದು ಹೋರಾಟ ಮಾಡಿ, ಸರ್ಕಾರದಿಂದ ಬಂದಿರುವ ಒಂದೇ ಒಂದು ಪತ್ರವನ್ನು ಪತ್ರಕರ್ತರ ಮುಂದಿಡಿ ಎಂದು ಸವಾಲು ಹಾಕಿದರು.
ಪತ್ರಕರ್ತರ ಮೂಗಿಗೆ ತುಪ್ಪ ಸವರಿ ದುಡಿಸಿಕೊಳ್ಳುವುದನ್ನು ಬಿಟ್ಟು ಬೇರೆ ಯಾವುದೇ ಹೋರಾಟ ಮಾಡಿಲ್ಲ, ಕೆಡ್ಲ್ಯೂಜೆ ರಾಜ್ಯಾದ್ಯಕ್ಷ ಶಿವಾನಂದ ತಗಡೂರು ರಾಜ್ಯದ ಪ್ರಮುಖ ಪತ್ರಿಕೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಾರ್ಯನಿರ್ವಹಿಸುವ ಪತ್ರಿಕೆಯಲ್ಲಿ ಜಿಲ್ಲಾ ತಾಲ್ಲೂಕು ಅಥವಾ ಹೋಬಳಿ ಮಟ್ಟದ ಪತ್ರಿಕೆ ವರದಿಗಾರರಿಗೆ, ಪೇ ಸ್ಲಿಪ್ ಅಥವಾ ಕೋಡಿಸಲು ಸಾದ್ಯವಾಗಿಲ್ಲ. ಇನ್ನೂ ರಾಜ್ಯದ ಪತ್ರಕರ್ತರ ಹಿತ ಕಾಯಲು ಹೇಗೆ ಸಾದ್ಯ? ಎಂದು ಪ್ರಶ್ನಿಸಿದರು.
ಪತ್ರಕರ್ತರ ಭವನಗಳು ಎಲ್ಲಾ ಸಂಘದ ಪತ್ರಕರ್ತರಿಗೂ ಬಳಕೆಗೆ ಒತ್ತಾಯ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸಲಹೆಗಾರ ಪ್ರಭಾಕರ್ ರಾಜ್ಯದ ಎಲ್ಲಾ ಪತ್ರಕರ್ತರ ಪರವಾಗಿರಬೇಕಾಗಿತ್ತು. ಕೇವಲ ಒಂದು ಜಿಲ್ಲೆಗೆ ಸೀಮಿತರಾಗಿರುವುದು ಸರಿಯಾದುದಲ್ಲ. ರಾಜ್ಯದ ಎಲ್ಲಾ ವಾರ್ತಾ ಇಲಾಖೆಗಳಲ್ಲಿ 300 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಿಂದ ಪತ್ರಕರ್ತರ ಸಮಸ್ಯೆ ಬಗೆಹರಿಸಲು ಸಾದ್ಯವೇ? ಆದ್ದರಿಂದ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು. ಕೆಲವು ಜಿಲ್ಲೆಗಳಲ್ಲಿ ಪತ್ರಿಕಾ ಭವನಗಳು ಒಂದು ಸಂಘದ ಆಸ್ತಿಯಂತಾಗಿವೆ. ಸರ್ಕಾರ ಕೂಡಲೇ ಪತ್ರಿಕಾ ಭವನಗಳನ್ನು ವಾರ್ತಾ ಇಲಾಖೆ ವಹಿಸಿ ಎಲ್ಲಾ ಸಂಘದ ಪತ್ರಕರ್ತರಿಗೂ ಬಳಕೆಯಾಗಬೇಕು. ಈ ಬಗ್ಗೆ ಈಗಾಗಲೇ ನ್ಯಾಯಾಲಯದ ಮುಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪತ್ರಕರ್ತರಿಗೂ ಇದರ ಬಳಕೆಯಾಗಲಿದೆ. ಅದುವರೆಗೆ ಈ ಬಂಗ್ಲೆ ಮಲ್ಲಿಕಾರ್ಜುನ್ ವಿರಮಿಸುವುದಿಲ್ಲ ಎಂದರು.
ಅಕ್ರಿಡೇಷನ್ ಕಾರ್ಡ್ ಕೇವಲ ಪತ್ರಿಕಾ ಮಾಲಿಕರು ಅವರ ಕುಟುಂಬಕ್ಕಾ: “ರಾಜ್ಯದಲ್ಲಿ ಹದಿನಾರು ಸಾವಿರ ಪತ್ರಕರ್ತರಿದ್ದಾರೆ. ಸರ್ಕಾರದಿಂದ ಬಂದಿರುವ ಅಕ್ರಿಡೇಷನ್ ಕಾರ್ಡಗಳು ಯಾರ ಪಾಲಾಗಿವೆ ಎಂದು ಬಹಿರಂಗ ಪಡಿಸಲಿ” ಎಂದರಲ್ಲದೇ ಕೇವಲ ಮಾಲೀಕರು, ಕುಟುಂಬಸ್ಥರು ಅಕ್ರಡೇಷನ್ ಕಾರ್ಡ್ ಬಳಕೆ ಮಾಡಿಕೊಂಡಿದ್ದಾರೆ. ಅಕ್ರಿಡೇಷನ್ ಎಲ್ಲಾ ಪತ್ರಿಕೆ ವರದಿಗಾರರಿಗೂ ಸಿಗುವಂತಾಗಬೇಕು. ಕಾ.ನಿ.ಪ.ದ್ವನಿ ಕೇವಲ ನಮ್ಮ ಸಂಘದ ಸದಸ್ಯರ ಜೊತೆಗೆ ರಾಜ್ಯದ ಎಲ್ಲಾ ಹದಿನಾರು ಸಾವಿರ ಪತ್ರಕರ್ತರ ಪರವಾಗಿ ಹೋರಾಟ ಮಾಡುತ್ತಿದೆ. ಅಕ್ರಿಡೇಷನ್ ಕಾರ್ಡ್, ಪತ್ರಕರ್ತರ ಮಾಸಾಶನಾ, ಪತ್ರಕರ್ತರ ಜೀವ ರಕ್ಷಣಾ ಕಾಯ್ದೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗುವುದಾಗಿ ಸರ್ಕಾರ ಘೋಷಿಸಿದೆ ಬಸ್ ಪಾಸ್ ನೀಡುವ ವಿಚಾರದಲ್ಲಿ ಯಾವ ಮಾನದಂಡ ಅನುಸರಿಸುತ್ತಿದೆ. ಹದ್ದಿನ ಕಣ್ಣು ಇಡಲಾಗಿದೆ, ಅದರಲ್ಲೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಅನ್ಯಾಯವಾದರೆ ಸಹಿಸಿಕೊಳ್ಳಲು ಸಾದ್ಯವೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಕಾ.ನಿ.ಪ.ದ್ವನಿ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಪಾಟೀಲ್,ರಾಜ್ಯ ಮಾದ್ಯಮ ಸಲಹೆಗಾರ ಜಗಳೂರು ಲಕ್ಷ್ಮಣ್ ರಾವ್, ರಾಜ್ಯ ಹಿರಿಯ ಪತ್ರಕರ್ತ ವಾಸುದೇವ್, ರಾಜ್ಯ ಕಾರ್ಯದರ್ಶಿ ಇರ್ಫಾನ್, ಸೇರಿದಂತೆ ಎಲ್ಲಾ ಜಿಲ್ಲೆಯ ಅದ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


