ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುರಿತು ಬಿಜೆಪಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷಕ್ಕೆ ಟೀಕಿಸೋದು ಬಿಟ್ಟು ಬೇರೇನು ಇಲ್ಲ. ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕಾರ ಮಾಡಲು ರೆಡಿ. ಮೊದಲ ಬಾರಿಗೆ ಟ್ಯಾಂಕರ್ ನಿಯಂತ್ರಣಕ್ಕೆ ತೆಗೆದುಕೊಂಡು ಟ್ಯಾಂಕರ್ ಮಾಫಿಯಾ ತಡೆಗಟ್ಟಲಾಗಿದೆ. ದರ ನಿಗದಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೇರೆ ಕಡೆ ಟ್ಯಾಂಕರ್ ತರಿಸಲು ಕೂಡ ಸೂಚಿಸಿದ್ದೇನೆ ಎಂದರು.
ಕಾವೇರಿ ನೀರು ಜಾಸ್ತಿ ಬರುತ್ತಾ ಇದೆ. ಕಾವೇರಿ ನೀರು 25 ml ನೀರು ಹೆಚ್ಚು ಬರುತ್ತಿದೆ. ಕಾವೇರಿ ನೀರು ಹೆಚ್ಚು ಡ್ರಾ ಮಾಡುತ್ತಿದ್ದೇವೆ. 110 ಹಳ್ಳಿಗಳಿಗೆ ಮೇ ಅಂತ್ಯಕ್ಕೆ 5ನೇ ಹಂತ ಮುಕ್ತಾಯ ಆಗುತ್ತದೆ. ಅಲ್ಲಿಯವರೆಗೆ ನಾವು ಜಾಗೃತರಾಗಿರಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


