ಯಾದಗಿರಿ: ಯಾದಗಿರಿ ತಾಲೂಕಿನ ಮಲ್ಹಾರ್ ತಾಂಡದಲ್ಲಿ ಪತ್ನಿಯನ್ನು, ಪತಿಯು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಸೋನಾಬಾಯಿ(40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಗ ಅರ್ಜುನ(17) ಗಂಭೀರ ಗಾಯಗೊಂಡಿದ್ದಾನೆ.
ರಾತ್ರಿ ತಾಯಿ ಸೋನುಬಾಯಿ ಹಾಗೂ ಮಗ ಅರ್ಜುನ ಮಲಗಿರುವಾಗ ಕುಡಿದ ನಶೆಯಲ್ಲಿ ಬಂದ ಆರೋಪಿ ಮಲ್ಲಪ್ಪ(45) ಕೊಡಲಿಯನ್ನು ತೆಗೆದುಕೊಂಡು ಪತ್ನಿಯ ಮೇಲೆ ಬೀಸಿದ್ದಾನೆ. ಈ ವೇಳೆ ತಾಯಿಯನ್ನು ಕಾಪಾಡಲು ಮಗ ಅಡ್ಡ ಬಂದಿದ್ದಾನೆ. ಕೊಡಲಿಯ ಹೊಡೆತಕ್ಕೆ ಗಂಭೀರ ಗಾಯಗೊಂಡಿದ್ದ ಸೋನುಬಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ಗಲಾಟೆಯನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗಂಭಿರ ಗಾಯಗೊಂಡ ಅರ್ಜುನ್ ನನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


