ಮಹಾ ಶಿವರಾತ್ರಿ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಲಕ್ಷೋಪ ಲಕ್ಷ ಭಕ್ತರಿಂದ ಮಾದಪ್ಪನ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ.
ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ವಿವಿಧ ಮೂಲಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಣೆಯಾಗಿದ್ದು, ಕೇವಲ 5 ದಿನಗಳಲ್ಲಿ 3.24 ಕೋಟಿ ರೂ. ಗೂ ಅಧಿಕ ಆದಾಯ ಸಂಗ್ರಹಣೆಯಾಗಿದೆ.
ಚಿನ್ನದ ರಥ, ಬೆಳ್ಳಿರಥ, ಹುಲಿವಾಹನ ಸೇವೆ, ಮುಡಿ ಸೇವೆ ಸೇರಿ ವಿವಿಧ ಸೇವೆಗಳಿಂದ ಬಂದಿರುವ ಆದಾಯ. ಹುಂಡಿ ಹಣ ಹೊರತುಪಡಿಸಿ ಭಕ್ತರ ಸೇವೆಗಳಿಂದಲ್ಲೇ ಮೂರುಕಾಲು ಕೋಟಿ ನಗದು ಸಂಗ್ರಹ.
ದಿನದಿಂದ ದಿನಕ್ಕೆ ತನ್ನ ಆದಾಯದಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಮಾದಪ್ಪ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟ. ಅತ್ಯಂತ ಹೆಚ್ಚು ಆದಾಯ ಬರುವ ದೇವಾಲಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀ ಕ್ಷೇತ್ರ ಆಗಿದೆ.
ಅಮಾವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ ಹಬ್ಬಗಳಂದು ನಡೆಯುವ ಜಾತ್ರಾ ಮಹೋತ್ಸವ. ಜತೆಗೆ ಅಮಾವಾಸ್ಯೆ ಸೇವೆ, ಸೋಮವಾರ, ಶುಕ್ರವಾರ ದಿನಗಳಂದೂ ಶ್ರಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಂದ ವಿವಿಧ ಸೇವೆ, ದೇಣಿಗೆ, ಕಾಣಿಕೆ, ಹುಂಡಿ ರೂಪದಲ್ಲಿ ಬರುವ ಕೋಟ್ಯಾಂತರ ರೂ ನಗದು. ವಾರ್ಷಿಕ ಸುಮಾರು 75 ರಿಂದ 100 ಕೋಟಿ ಆದಾಯ ಬರುತ್ತಿರುವ ಮಲೆಮಹದೇಶ್ವರ ಬೆಟ್ಟ. ಪ್ರಾಧಿಕಾರದ ವತಿಯಿಂದ ಮಾಹಿತಿ ಲಭ್ಯ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ವಹಣೆ ನಡೆಯುತ್ತಿರುವ ಶ್ರೀ ಕ್ಷೇತ್ರವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


