ಮೆಣಸಿನಕಾಯಿ ದರ ದಿಢೀರ್ ಕುಸಿತಗೊಂಡಿದ್ದಕ್ಕೆ ರೈತರು ಆಕ್ರೋಶ ಗೊಂಡು, ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆ ಬಳಿ ಗಲಾಟೆ ನಡೆಸಿದ ಪ್ರಕರಣ ಸಂಬಂಧ 42 ಜನರನ್ನ ಬಂಧಿಸಿ ಹೇಳಿಕೆ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬ್ಯಾಡಗಿ ಎಂಪಿಎಂಸಿ ಕಚೇರಿ ಬಳಿ ಗಲಾಟೆ ಪ್ರಕರಣ ಸಂಬಂಧ 42 ಜನರನ್ನ ಬಂಧಿಸಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಹೊರಗಿನಿಂದ ಬಂದವರು ಪರಾರಿಯಾಗಿದ್ದಾರೆ. ಪೊಲೀಸರ 1 ತಂಡ ಆಂಧ್ರ ಪ್ರದೇಶದ ನೆಲ್ಲೂರು ಕಡೆ ಕಳುಹಿಸಿಕೊಡಲಾಗಿದೆ. ತಪ್ಪಿಸಿಕೊಂಡವರನ್ನ ಬಂಧಿಸಲಾಗುತ್ತದೆ ಎಂದರು.
ಯಾವ ಕಾರಣಕ್ಕೆ ಗಲಾಟೆ ಆಗಿದೆ ಎಂಬುದನ್ನ ತನಿಖೆ ಮಾಡುತಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಒಣಮೆಣಸಿನ ಕಾಯಿ ದರ ಇಳಿಕೆ ಮಾಡಿಸಿ ಗಲಾಟೆ ಮಾಡಿಸಿರಬಹುದು ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದರು.
ಮೊನ್ನೆ ಒಣ ಮೆಣಸಿಕನಾಯಿ ದರ ಇಳಿಕೆಯಾಗಿದ್ದಕ್ಕೆ ಬ್ಯಾಡಗಿ ಮಾರುಕಟ್ಟೆ ಆಡಳಿತ ಕಚೇರಿ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು. ಕಚೇರಿ ಮುಂದೆ ಇದ್ದ ಕಾರಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರ ಹಾಕಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


