ಈ ಘಟನೆ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಕಿರಿಕ್ ಮಾಡಿ ನಾಯಿ ಮಾಲೀಕನಿಗೆ ಬಾರಿಸಿದ್ದಲ್ಲದೇ ಪುಂಡರು, ಮಾಲೀಕನ ಮಗಳನ್ನು ಕೂಡ ಎಳೆದಾಡಿದ ಮನಕಲಕುವ ಘಟನೆ ಬಗ್ಗೆ ವರದಿಯಾಗಿದೆ. ದೂರುದಾರೆ ಶಾಲಿನಿಯವರ ಮನೆಯಲ್ಲಿ ನಾಯಿ ಬೊಗಳಿದ್ದು, ಪಕ್ಕದ ಮನೆಯ ಶಂಕರ್ ರಾತ್ರಿ 10-30ಕ್ಕೆ ಸ್ನೇಹಿತರ ಜೊತೆ ಬಂದಿದ್ದರು.
ಅಪರಿಚಿತರು ಬಂದಿದ್ದಕ್ಕೆ ನಾಯಿ ಬೊಗಳಿದೆ. ಇಷ್ಟಕ್ಕೇ ಶಂಕರ್ ಅಂಡ್ ಗ್ಯಾಂಗ್ ನಾಯಿ ಮೇಲೆ ರೇಗಾಡಿದೆ. ನಾಯಿಯ ಮಾಲೀಕರು ಇದ್ಯಾಕಪ್ಪ ಅಂತಾ ಕೇಳೋಕೆ ಬಂದಾಗ ಅವರ ಮೇಲೂ ಬಾರಿಸಲು ಮುಂದಾಗಿದ್ದಾರೆ. ಇತ್ತ ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು ಕೂಡ ಗ್ಯಾಂಗ್ ಎಳೆದಾಡಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಯುವತಿ ಅಳುತ್ತಾ ನಡೆದ ಘಟನೆಯ ಆಡಿಯೊ ಕಳಿಸಿದ್ದಾಳೆ. ನ್ಯಾಯ ಕೊಡಿಸುವಂತೆ ಮಹಿಳಾ ಅಧ್ಯಕ್ಷರಿಗೆ ಅಳುತ್ತಾ ಆಡಿಯೊ ಮೆಸೇಜ್ ಕಳಿಸಿದ್ದಳು. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ರಿಂದ ಆರೋಪಿ ಕಿರಿಕ್ ಪಾರ್ಟಿ ಶಂಕರ್ ಅರೆಸ್ಟ್ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


