ಪಾವಗಡ: ತಾಲೂಕಿನ ಬಿಜೆಪಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಂಗಪ್ಪ ಆಯ್ಕೆಯಾಗಿದ್ದಾರೆ.
ಪಾವಗಡ ಪಟ್ಟಣದ ನವನಿಧಿ ಕನ್ವೆನ್ಷನ್ ಹಾಲ್ ನಲ್ಲಿ ಪಕ್ಷದ ಧ್ವಜವನ್ನು ಜಿಲ್ಲಾಧ್ಯಕ್ಷರಿಂದ ಪಡೆಯುವ ಮೂಲಕ ಅಧ್ಯಕ್ಷರ ಪದವಿಯನ್ನು ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮನ್ನು ಪಾವಗಡ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾಡಿರುವುದಕ್ಕೆ ಎಲ್ಲಾ ನಾಯಕರಿಗೂ ಸಹ ಕೃತಜ್ಞತೆಗಳನ್ನು ಸಲ್ಲಿಸಿದರು.
ಪದಗ್ರಹಣ ಸಮಾರಂಭದಲ್ಲಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ, ನಿಕಟ ಪೂರ್ವ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್, ಸಾಕೇಲ್ ಶಿವಕುಮಾರ್, ಕೊತ್ತೂರು ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಬ್ಯಾಡನೂರು ಶಿವು, ಅರುಣ್ K.S.,ಜಿಲ್ಲಾ ವಕ್ತಾರರಾದ ಚೈತನ್ಯ ಪ್ರಭು, ಜಿಲ್ಲಾ ಮೋರ್ಚಾ ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಪುರುಷೋತ್ತಮ, ಪ್ರಸಾದ್ ಬಾಬು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಲ್ಕುಂದ್ ರಾಜ್, ನವೀನ್ ಸೀತಾರಾಮ್ ಹಾಗೂ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


