ಬಿಸಿಲಿನ ಬೇಗೆಯಿಂದ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳಿಗೆ ನೀರು ಆಹಾರದ ಕೊರತೆಯನ್ನು ಮನದಲ್ಲಿಟ್ಟುಕೊಂಡು ತೆಲಂಗಾಣ ರಾಜ್ಯ ಶಿಕ್ಷಣ ಇಲಾಖೆ ಮಾರ್ಚ್ 15ರಿಂದ ಅರ್ಧ ದಿನ ಮಾತ್ರ ಶಾಲೆಯನ್ನು ನಡೆಸಲು ಈ ಹಿಂದೆಯೇ ನಿರ್ಧರಿಸಿತ್ತು. ಅದರಂತೆಯೇ ಈಗ ಶಾಲೆಯನ್ನು ಅರ್ಧ ದಿನ ಮಾಡಲು ಸಿದ್ಧವಾಗಿದೆ. ಆದ್ರೆ, ಈ ಮಧ್ಯೆ ವಿದ್ಯಾರ್ಥಿಯೊಬ್ಬ ಮಾಡಿಕೊಂಡ ಮನವಿ ನೋಡಿದ್ರೆ ಎಂಥವರ ಕಣ್ಣಲ್ಲಿ ನೀರು ತರಿಸುತ್ತದೆ. ಹಾಗಾದರೆ ಆತ ಬರೆದ ಪತ್ರದಲ್ಲಿ ಏನಿದೆ?
ಹೆಚ್ಚಿನ ಮಕ್ಕಳಿಗೆ ಬಿಸಿಯೂಟ ಎಷ್ಟು ಮುಖ್ಯ ಅನ್ನುವಂಥದ್ದನ್ನು ಈ ವರದಿಯಲ್ಲಿ ನೀವು ನೋಡಬಹುದು. ಈ ದೇಶದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಅದರಲ್ಲೂ ನೀರಿಲ್ಲದೇ ಒದ್ದಾಡುವವರ ಸಂಖ್ಯೆ ಈಗ ಎಲ್ಲೆಡೆ ಕಾಣಿಸಿಕೊಳ್ತಿದೆ. ಬಿರು ಬಿಸಿಲಿನ ತಾಪಕ್ಕೆ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಮಕ್ಕಳಿಗೆ ಕಷ್ಟವೆನಿಸಬಹುದು ಎಂಬ ಮುಂದಾಲೋಚನೆಯಿಂದ ತೆಲಂಗಾಣ ಸರ್ಕಾರ ಈ ಕುರಿತಂತೆ ಅಧಿಕೃತವಾಗಿ ಘೋಷಿಸಿದ್ದು, ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಅರ್ಧ ದಿನ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
ಇದೆಲ್ಲದರ ಮಧ್ಯೆ ಶಾಲೆ ಅರ್ಧ ದಿನ ನಡೆದರೆ, ತನಗೆ ಬಿಸಿಯೂಟ ಸಿಗುವುದಿಲ್ಲ ಎಂಬ ಅರಿವಿನಿಂದ ಸಾತ್ವಿಕ್ ಎಂಬ ವಿದ್ಯಾರ್ಥಿ, ದಯವಿಟ್ಟು ಅರ್ಧ ದಿನ ರಜೆ ಮಾಡುವುದು ಬೇಡ, ನನಗೆ ಮಧ್ಯಾಹ್ನದ ಊಟ ತುಂಬ ಅಗತ್ಯವಿದೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾನೆ. ಸದ್ಯ ಈ ಪತ್ರ ವೈರಲ್ ಆಗಿದೆ.ಅನೇಕರು ಇದಕ್ಕೆ ಪ್ರತಿಕ್ರಿಯಿಸಿ ಅಯ್ಯೋ ಪಾಪ ಎಂದಿದ್ದಾರೆ.
ಮಾರ್ಚ್ 15ರಿಂದ ಅರ್ಧ ದಿನದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಕಾರ್ಯನಿರ್ವಹಿಸಲು ಅರ್ಧ ದಿನದ ಅಧ್ಯಯನದ ವೇಳಾಪಟ್ಟಿಯನ್ನೂ ಕೂಡ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಎಲ್ಲಾ ವಿದ್ಯಾರ್ಥಿಗಳು ರಜೆ ಸಿಕ್ಕಿತು ಎಂದು ಸಂತಸಪಡುತ್ತಿದ್ದರೇ ಈ ಹುಡುಗ ಮಾತ್ರ ಅತೀವ ಬೇಸರ ಹೊರಹಾಕಿದ್ದು, ತನಗೆ ರಜೆ ಬೇಡ, ಅರ್ಧ ದಿನ ಮಾಡಬೇಡಿ ಎಂದು ಹೇಳಿದ್ದಾನೆ.
ಮಾರ್ಚ್ 15ರಿಂದ ಅರ್ಧ ದಿನದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಕಾರ್ಯನಿರ್ವಹಿಸಲು ಅರ್ಧ ದಿನದ ಅಧ್ಯಯನದ ವೇಳಾಪಟ್ಟಿಯನ್ನೂ ಕೂಡ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಎಲ್ಲಾ ವಿದ್ಯಾರ್ಥಿಗಳು ರಜೆ ಸಿಕ್ಕಿತು ಎಂದು ಸಂತಸಪಡುತ್ತಿದ್ದರೇ ಈ ಹುಡುಗ ಮಾತ್ರ ಅತೀವ ಬೇಸರ ಹೊರಹಾಕಿದ್ದು, ತನಗೆ ರಜೆ ಬೇಡ, ಅರ್ಧ ದಿನ ಮಾಡಬೇಡಿ ಎಂದು ಹೇಳಿದ್ದಾನೆ.
ಅಸಲಿಗೆ ಆತ ಬರೆದ ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿಯುವುದಾದರೆ.ತನ್ನ ಪುಸ್ತಕದಲ್ಲಿ ಬೇಸರ ವ್ಯಕ್ತಪಡಿಸಿರುವ ಸಾತ್ವಿಕ್, “ಬೇಸಿಗೆ ರಜೆಯಲ್ಲಿ ಮನೆಗೆ ಹೋದರೆ ಊಟ ಸಿಗಲ್ಲ. ತಾತ ಮತ್ತು ಅಜ್ಜಿ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ದಯವಿಟ್ಟು ಬೇಸಿಗೆ ರಜೆ ಕೊಡಬೇಡಿ. ನಾನು ಶಾಲೆಯಲ್ಲೇ ಇರುತ್ತೇನೆ. ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಬಿಸಿಯೂಟ ಬಹಳ ಮುಖ್ಯ. ಶ್ರಮಪಟ್ಟು ಓದಿ ದೊಡ್ಡ ಮಟ್ಟಕ್ಕೆ ತಲುಪುತ್ತೇನೆ” ಎಂದು ಬರೆದಿರುವ ಎರಡು ಪುಟಗಳ ಪತ್ರ ನಿಜಕ್ಕೂ ಎಂಥವರ ಮನವನ್ನು ಕೂಡ ಕಲಕುವಂತೆ ಮಾಡುತ್ತೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


