ಬ್ಯಾಡಗಿ ತಾಲೂಕಿನ ಕದರಮಂಡಲಗಿ ಕಾಂತೇಶಸ್ವಾಮಿ ಮಂದಿರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಅದೃಷ್ಟವಶಾತ್ ಬಸವರಾಜ ಬೊಮ್ಮಾಯಿ ಅವರು ಪಾರಾಗಿದ್ದಾರೆ.
ಕಾಂತೇಶಸ್ವಾಮಿ ದರ್ಶನ ಪಡೆಯಲು ತೆರಳಿದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಬೊಮ್ಮಾಯಿ ಅವರನ್ನು ಮುಖಂಡರು ಪಾರು ಮಾಡಿದ್ದಾರೆ. ಬೊಮ್ಮಾಯಿ ಅವರ ಕಾರಿನ ಚಾಲಕ ಹಾಗೂ ಕೆಲ ಕಾರ್ಯಕರ್ತರಿಗೆ ಹೆಜ್ಜೇನು ಕಡಿದ ಪರಿಣಾಮ ಚಿಕಿತ್ಸೆಗೆ ಕಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


