ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದ ಎನ್ ಜಿಎಲ್ ಲಾಡ್ಜ್ ಬಳಿ ಪೊದೆಯೊಂದರಲ್ಲಿ ಮಹಿಳೆಯೋರ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ವಿಜಯಲಕ್ಷ್ಮೀ ಅನ್ನೋ ಹೆಸರಿನ ಮಹಿಳೆ, ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಮಹಿಳೆಯೇ ಬರ್ಬರವಾಗಿ ಕೊಲೆಯಾದಾಕೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ನಂತರ ತನಿಖೆ ಮೂಲಕ ಗೊತ್ತಾಗಿದ್ದೇ ಇದೊಂದು ಅನೈತಿಕ ಸಂಬಂಧದ ಕೊಲೆ ಎಂದು. ತನಿಖೆ ಮುಂದುವರಿಸಿದಾಗ ತಿಳಿದು ಬಂದಿದ್ದೇ 22 ವರ್ಷದ ಚಿಗುರು ಮೀಸೆಯ ಯುವಕನ ಹೆಸರು. ಆತನ ಹೆಸರೇ ದೇವಣ್ಣ.
ವಿಜಯಲಕ್ಷ್ಮೀ ಗಂಡ ಎರಡು ವರ್ಷಗಳ ಹಿಂದೆ ತೀರಿಹೋಗಿದ್ದ. ಆಗ ಗಂಡನ ಮನೆ ಬಿಟು ಮಗನೊಂದಿಗೆ ವಿಜಯಲಕ್ಷ್ಮೀ ತವರು ಸೇರಿದಳು. ನಂತರ ಆಕೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ವಿಜಯಲಕ್ಷ್ಮೀ ಗಾರೆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ದೇವಣ್ಣ ಅನ್ನೋನ ಪರಿಚಯವಾಗಿತ್ತು.
ಈ ದೇವಣ್ಣ ವಿಜಯಲಕ್ಷ್ಮೀಯನ್ನು ಕಂಡಾಗೆಲ್ಲ ಅತ್ತೆ ಅತ್ತೆ ಎಂದು ಕರೆಯುತ್ತಿದ್ದ. ಆದರೆ ಆತ ಯಾವುದೇ ಸುಳಿವಿಲ್ಲದೇ ವಿಜಯಲಕ್ಷ್ಮೀಗೆ ಹತ್ತಿರವಾಗಿದ್ದ. ಪರಿಚಯ ನಡೆದು, ನಂತರ ಸಲುಗೆ ಬೆಳೆದು, ಸಲುಗೆ ಅನೈತಿಕ ಸಂಬಂಧಕ್ಕೆ ದಾರಿ ಮಾಡಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇವರ ಮಿಲನಮಹೋತ್ಸವ ನಡೆಯುತ್ತಿತ್ತು. ಪಟ್ಟಣಕ್ಕೆ ಹೋದಾಗಲೂ ಇವರಿಬ್ಬರು ಸೇರುತ್ತಿದ್ರು.
ಒಮ್ಮೊಮ್ಮೆ ವಿಜಯಲಕ್ಷ್ಮೀ ಕೈಗೆ ಸಿಗದೇ ಇದ್ದಾಗ ಮಾಳಿಗೆ ಏರಿ ಆಕೆಯನ್ನು ಭೇಟಿಯಾಗೋಕೆ ದೇವಣ್ಣ ಮುಂದಾಗುತ್ತಿದ್ದ. ಅದೇಗೋ ಈ ವಿಷಯ ವಿಜಯಲಕ್ಷ್ಮೀ ಅಣ್ಣ ಚೌಡಣ್ಣನಿಗೆ ಗೊತ್ತಾಗಿ, ವಾರ್ನಿಂಗ್ ನೀಡಲಾಯಿತು. ಆದರೆ ಆತ ಬುದ್ಧಿ ಕಲಿಯಲಿಲ್ಲ. ಇವರ ಆಟ ಮಿತಿ ಮೀರಿದಾಗ ವಿಜಯಲಕ್ಷ್ಮೀ ಅಣ್ಣ ತಂಗಿಗೆ ಹೊಡೆದು ಬುದ್ಧಿ ಹೇಳಿದ್ದ. ನಂತರ ಆಕೆ ದೇವಣ್ಣನ ಸಂಪರ್ಕ ಬಿಟ್ಟಳು.
ಕಳೆದ ಎರಡು ತಿಂಗಳಿನಿಂದ ಅವಾಯ್ಡ್ ಮಾಡಿದಕ್ಕೆ ದೇವಣ್ಣ ಸಿಟ್ಟು ಗೊಂಡಿದ್ದ. ಹದಿಹರೆಯ, ಚಿಗುರು ಮೀಸೆಯ ಯುವಕ ಮೋಹದ ಜಾಲಕ್ಕೆ ಬಿದ್ದಿದ್ದು, ವಿಜಯಲಕ್ಷ್ಮೀಯನ್ನು ಬಿಟ್ಟು ಇರೋಕೆ ಆಗಿಲ್ಲ. ಮಾ.10 ರಂದು ವಿಜಯಲಕ್ಷ್ಮೀ ಮುದಗಲ್ ಬಳಿಯ ದೇವಸ್ಥಾನಕ್ಕೆ ಹೋಗಿದ್ದಳು. ಈ ಮಾಹಿತಿ ತಿಳಿದು ಆತನೂ ಆಕೆಯ ಜೊತೆಗೆ ಹೋಗಿದ್ದ. ಅಲ್ಲಿಂದ ವಾಪಸ್ ಬರುವಾಗ ಲಿಂಗಸುಗೂರ ಪಟ್ಟಣದ ಪೊದೆಯೊಂದರಲ್ಲಿ ಇವರಿಬ್ಬರು ತಮ್ಮ ಕಾಮ ತೃಷೆ ತೀರಿಸಿಕೊಂಡಿದ್ದಾರೆ. ನಂತರ ನನ್ನನ್ನು ಅವಾಯ್ಡ್ ಮಾಡ್ತೀಯಾ ಎಂದು ವಿಷಯ ತೆಗೆದು, ಗಲಾಟೆ ಮಾಡಿ ಆಕೆಯನ್ನು ಕಲ್ಲಿನಿಂದ ತಲೆಗೆ ಹೊಡೆದು, ಆಕೆಯ ಸೀರೆಯಿಂದಲೇ ಉಸಿರುಗಟ್ಟಿಸಿ ಕೊಲೆಗೈದಿದ್ದ ಎನ್ನುವುದು ತನಿಖೆ ಮೂಲಕ ಗೊತ್ತಾಗಿದೆ. ಇದೀಗ ಆರೋಪಿ ದೇವಣ್ಣ ಹೇಳಿಕೆ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


