ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ದೊಡ್ಡೇಣ್ಣೆಗೆರೆ ಗ್ರಾಮದ ಶ್ರೀ ಭೀಮಾಸತಿ ತೀಥಾರಾಜ ಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ರಥೋತ್ಸವ ಶುಕ್ರವಾರ — ಶನಿವಾರದಂದು ಬಹಳ ವಿಜೃಂಭಣೆಯಿಂದ ಬಂಜಾರ ಸಮುದಾಯದ ಜನಾಂಗದಿಂದ ನಡೆಸಲಾಯಿತು.
ಭೀಮಾಸತಿ ತೀಥಾರಾಜ ಅವರ ವಿಗ್ರಹಕ್ಕೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು. ಈ ಒಂದು ಜಾತ್ರಾ ಮಹೋತ್ಸವದಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು.
ಮಹಿಳೆಯರು ಬಂಜಾರ ಸಮುದಾಯದ ಉಡುಪುಗಳನ್ನು ಧರಿಸಿಕೊಂಡು ಲಂಬಾಣಿ ನೃತ್ಯವನ್ನು ಮಾಡಿದರು, ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳ್ಳಿಸಿದರು ಹಾಗೂ ಹಿರಿಯರಿಂದ ಭಜನೆ ಕಾರ್ಯಕ್ರಮವನ್ನು ನಡೆಸಲಾಯಿತು.
ಚಿತ್ರದುರ್ಗ ಜಿಲ್ಲಾ ಬೀಮಾಸಮುದ್ರ ಗ್ರಾಮದ ಚಂದ್ರಶೇಖರ್ 1,11,101 ರೂಪಾಯಿ ಚೆಕ್ ಅನ್ನು ಭೀಮಾಸತಿ ದೇವಸ್ಥಾನಕ್ಕೆ ನೀಡಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296